×
Ad

ಪ್ರಧಾನಿ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್‌ ಕಡೆಗಣನೆ, ಬಿಎಸ್ ವೈಗೆ ಇರಲಿಲ್ಲ ಆಹ್ವಾನ: ಕಾಂಗ್ರೆಸ್

Update: 2023-01-12 23:54 IST

ಬೆಂಗಳೂರು: 'ಇಂದು ಕರ್ನಾಟಕದಲ್ಲೇ ಇದ್ದ ಪ್ರಧಾನಿ ಕಾರ್ಯಕ್ರಮದತ್ತ ಬಿಎಸ್ ವೈ ಸುಳಿಯಲೇ ಇಲ್ಲ. ಪ್ರೊಟೊಕಾಲ್ ನೆಪದಲ್ಲಿ ಕನಿಷ್ಠ ಪಕ್ಷ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಲಾದರೂ BSY ಅವರಿಗೆ ಬಿಜೆಪಿ ಅವಕಾಶ ಮಾಡಿಕೊಡಲಿಲ್ಲ' ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ' BSYರನ್ನು ನೆನಸಿಕೊಳ್ಳದ ಮೋದಿ ಮೌನವು #BSYmuktaBJP ಅಭಿಯಾನದ ಮುಂದುವರೆದ ಬಾಗವಾಗಿದೆ' ಎಂದು ಹೇಳಿದೆ. 

''ಸ್ವತಃ ತಮ್ಮದೇ ಕ್ಷೇತ್ರದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್‌ ಕಡೆಗಣನೆ, ಕೊನೆಯ ಆಹ್ವಾನ. ಬಿಎಸ್ ವೈ ಅವರಿಗೆ ಕನಿಷ್ಠ ಆಹ್ವಾನವೂ ಇಲ್ಲ, ಗಣನೆಗೂ ತೆಗೆದುಕೊಂಡಿಲ್ಲ. ಬಿಜೆಪಿಯಲ್ಲಿನ ಲಿಂಗಾಯತ ನಾಯಕತ್ವವನ್ನು ಕೊನೆಗಾಣಿಸುವಲ್ಲಿ 'ಸಂತೋಷ ಕೂಟ' ಯಶಸ್ವಿಯಾಗಿ ಮುಂದುವರೆದಿದೆ. ಅದಕ್ಕೆ ನರೇಂದ್ರ ಮೋದಿ ಅವರೂ ಕೈಜೋಡಿಸಿದ್ದಾರೆ'' ಎಂದು ಕಾಂಗ್ರೆಸ್ ಆರೋಪಿಸಿದೆ. 

Similar News