×
Ad

ಜ.29ಕ್ಕೆ ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಸ್ಮಾರಕ ಅನಾವರಣ

Update: 2023-01-13 22:36 IST

ಬೆಂಗಳೂರು, ಜ. 13: ಕನ್ನಡ ಚಿತ್ರರಂಗದ ಹಿರಿಯ ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದ್ದು, ಜ.29ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಮಾರಕ ಉದ್ಘಾಟಿಸಲಿದ್ದಾರೆ.

ಹಿರಿಯ ನಟ ವಿಷ್ಣುವರ್ಧನ್ ಅವರು ನಿಧನರಾದ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದ್ದು, ಈಗ ಉದ್ಘಾಟನೆಗೆ ಸಿದ್ಧವಾಗಿದೆ. ಭೂಮಿಯ ವ್ಯಾಜ್ಯ, ರೈತರ ಪ್ರತಿಭಟನೆ ನಡುವೆಯೂ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ, ನಟ ಅನಿರುದ್ಧ ಅವರ ಹೋರಾಟದ ಫಲವಾಗಿ ಮತ್ತು ಸರಕಾರದ ನೆರವಿನೊಂದಿಗೆ ಈಗ ಸ್ಮಾರಕ ಸಿದ್ಧವಾಗಿದೆ.

ಮೈಸೂರು ತಾಲೂಕು ಹಾಲಾಳು ಗ್ರಾಮದಲ್ಲಿ ಸರಕಾರ ನೀಡಿರುವ 5 ಎಕರೆ ಪ್ರದೇಶದ ಪೈಕಿ 3 ಎಕರೆಯಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಸ್ಮಾರಕದ ಆವರಣದಲ್ಲಿ ಸುಮಾರು 7 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಿಸಲಾಗಿದೆ. 

Similar News