ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜ್ಯ ಭೇಟಿ ಕಾರ್ಯಕ್ರಮ ರದ್ದು
Update: 2023-01-13 22:47 IST
ಬೆಂಗಳೂರು, ಜ.13: ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಜ.15ರಂದು ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಅವರ ರಾಜ್ಯ ಭೇಟಿ ರದ್ದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್(ಐಐಎಂ)ನ ಹೊಸ ನಿರ್ವಹಣಾ ಅಭಿವೃದ್ಧಿ ಕೇಂದ್ರ(ಎಂಡಿಸಿ)ದ ಉದ್ಘಾಟನೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ಇಶಾ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ 112 ಅಡಿ ಎತ್ತರದ ಆದಿಯೋಗಿಯ ಪುತ್ಥಳಿಯ ಉದ್ಘಾಟನಾ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಪಾಲ್ಗೊಳ್ಳಬೇಕಿತ್ತು.