×
Ad

40% ಸರ್ಕಾರದ 'ಹುದ್ದೆ ಮಾರಾಟ ಯೋಜನೆ' ಯಶಸ್ವಿಯಾಗಿ ಮುಂದುವರಿದಿದೆ: ಕಾಂಗ್ರೆಸ್

ಸಿಎಚ್‌ಒ ನೇಮಕಾತಿಯಲ್ಲಿ ಅಕ್ರಮ ಆರೋಪ ವಿಚಾರ ► 'ವಾರ್ತಾ ಭಾರತಿ' ವಿಶೇಷ ವರದಿ ಉಲ್ಲೇಖಿಸಿ ಟ್ವೀಟ್

Update: 2023-01-13 23:29 IST

ಬೆಂಗಳೂರು, ಜ.13: ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್‌ಒ)ಗಳ ನೇಮಕಾತಿಯಲ್ಲಿ ಇಲಾಖಾ ಅಧಿಕಾರಿಗಳು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡದಿರುವ ಬಗ್ಗೆ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದು ಕೊಂಡಿದೆ. 

ಶುಕ್ರವಾರ 'ಜಿಲ್ಲಾವಾರು ಸಿಎಚ್‌ಒ ನೇಮಕಾತಿಯಲ್ಲಿ ಅಕ್ರಮ: 100ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯ ಆರೋಪ'  ಎಂಬ 'ವಾರ್ತಾ ಭಾರತಿ'ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

''40% ಸರ್ಕಾರದ 'ಹುದ್ದೆ ಮಾರಾಟ ಯೋಜನೆ' ಯಶಸ್ವಿಯಾಗಿ ಮುಂದುವರೆದಿದೆ.  ಆರೋಗ್ಯ ಇಲಾಖೆಯ CHO ನೇಮಕಾತಿಯಲ್ಲಿ ಅರ್ಹರನ್ನು ಕಡೆಗಣಿಸಿ ಗೋಲ್ಮಾಲ್ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ, ಇದು ಹುದ್ದೆ ವ್ಯಾಪಾರದ ಚೌಕಾಶಿಗಾಗಿ ಮಾಡುತ್ತಿರುವ ತಂತ್ರವಲ್ಲವೇ? ಈ ನೇಮಕಾತಿಯಲ್ಲಿ ಎಷ್ಟು ಕೋಟಿ ಡೀಲಿಂಗ್ ಕುದುರಿಸಿಕೊಂಡಿದ್ದೀರಿ?'' ಎಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಪ್ರಶ್ನೆ ಮಾಡಿದೆ. 

Similar News