ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ: ಐವರು ಪರಿಷತ್ ಸದಸ್ಯರ ಮತದಾನದ ಹಕ್ಕು ಎತ್ತಿ ಹಿಡಿದ ಹೈಕೋರ್ಟ್

Update: 2023-01-15 15:01 GMT

ಕಲಬುರಗಿ, ಜ. 15: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಐವರು ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 

ಮಹಾನಗರ ಪಾಲಿಕೆಗೆ 2021ರ ಸೆಪ್ಟೆಂಬರ್ ನಲ್ಲಿ ಚುನಾವಣೆ ನಡೆದಿತ್ತು. ಆಗ ಬಂದ ಫಲಿತಾಂಶದಲ್ಲಿ 55 ವಾರ್ಡ್‍ಗಳಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ವಾರ್ಡ್‍ಗಳಲ್ಲಿ ಗೆದ್ದಿದ್ದವು. ಅದಾದ ನಂತರ ಮೇಯರ್ ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಬಿಜೆಪಿಯ ಐವರು ಎಂಎಲ್‍ಸಿಗಳಾದ ಲಕ್ಷ್ಮಣ ಸವದಿ, ಭಾರತಿ ಶೆಟ್ಟಿ, ರಘುನಾಥ ಮಲ್ಕಾಪುರೆ, ಮುನಿರಾಜು, ಲೆಹರ್‍ಸಿಂಗ್ ಅವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡುವ ಮೂಲಕ ಮೇಯರ್ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಪಡೆದಿದ್ದರು. ಇದರ ವಿರುದ್ಧ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಿತ್ತು.

ಪಾಲಿಕೆಗೆ 2022ರ ಫೆ.22ಕ್ಕೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಆ ಸಂದರ್ಭದಲ್ಲಿ ಸರಕಾರ ಎಸ್ಸಿ ಪುರುಷಕ್ಕೆ ನಿಗದಿ ಮಾಡಲಾಗಿತ್ತು. ಇದನ್ನೂ ಸಹ ಕಾಂಗ್ರೆಸ್ ವಿರೋಧಿಸಿ ಹೈಕೋಟ್ ಮೆಟ್ಟಿಲೇರಿತ್ತು. ಮೊದಲು ಏಕ ಸದಸ್ಯ ಪೀಠ ಕಾಂಗ್ರೆಸ್ ಪರವಾಗಿ ತೀರ್ಪು ನೀಡಿತ್ತು. ನಂತರ ಅದನ್ನು ಪ್ರಶ್ನಿಸಿ ಬಿಜೆಪಿ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದರು. 

ಪಾಲಿಕೆಯ ವ್ಯಾಪ್ತಿಯಲ್ಲಿ ಹೆಸರು ಸೇರ್ಪಡೆ ಮಾಡಿರುವ ಎಂಎಲ್‍ಸಿಗಳಾದ ಲಕ್ಷ್ಮಣ ಸವದಿ, ಭಾರತಿ ಶೆಟ್ಟಿ, ರಘುನಾಥರಾವ್ ಮಲ್ಕಾಪುರೆ ಸೇರಿ ಐವರ ಮತದಾನಕ್ಕೆ ಅನುಮತಿ ನೀಡಿ ಕಲಬುರಗಿ ವಿಭಾಗೀಯ ಪೀಠ ಆದೇಶ ನೀಡಿದೆ. ಆದರೆ ಈಗ ಸವದಿ ಅವಧಿ ಮುಗಿದಿದೆ. 2022ರ ಫೆ.22ಕ್ಕೆ ಪಾಲಿಕೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಮೇಯರ್ ಸ್ಥಾನವನ್ನು ಎಸ್ಸಿ ಪುರುಷ ಸ್ಥಾನಕ್ಕೆ ಮೀಸಲಿರುವುದನ್ನು ಸಹ ಕಾಂಗ್ರೆಸ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದನ್ನು ಸಹ ಹೈಕೋರ್ಟ್ ಮೇಯರ್ ಸ್ಥಾನ ಎಸ್ಸಿ ಪುರುಷ ನಿಗದಿಯಾಗಿರುವುದುನ್ನು ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ಅನಿಲ್ ಬಿ ಕಟ್ಟಿ ಪೀಠದ ಆದೇಶದಲ್ಲಿ ಎತ್ತಿ ಹಿಡಿದಿದೆ.

Similar News