'ನಾ ನಾಯಕಿ' ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ: ಸಿಎಂ ಬೊಮ್ಮಾಯಿ ವ್ಯಂಗ್ಯ

Update: 2023-01-16 07:26 GMT

ಹುಬ್ಬಳ್ಳಿ, ಜ.16: ಕಾಂಗ್ರೆಸ್ ಹಮ್ಮಿಕೊಂಡಿರುವ  ‘ನಾ ನಾಯಕಿ’ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ವಿಪರ್ಯಾಸ ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಆವರಣದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿ ಅವರು, ಪ್ರಿಯಾಂಕಾ ಗಾಂಧಿ ಅವರನ್ನು ನಾಯಕಿ ಮಾಡಲು ಕರ್ನಾಟಕ ಮಹಿಳೆಯರು ಸಿದ್ಧರಿಲ್ಲ ಎಂದರು.

ಯುವ ಜನೋತ್ಸವವನ್ನು, ಯುವ ವಿನಾಶೋತ್ಸವ' ಎಂಬ ಕಾಂಗ್ರೆಸ್ ನಾಯಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರದ್ದು ಯಥಾ ಬುದ್ಧಿ, ತಥಾ ಮಾತುಗಳು.‌ ಅವರಿಗೆ ವಿನಾಶದ ಕನಸುಗಳು, ಅದರಲ್ಲೂ ಕಾಂಗ್ರೆಸ್ ವಿನಾಶದ ಕನಸುಗಳು ಬೀಳುತ್ತಿವೆ. ಎಲ್ಲದರಲ್ಲೂ ಅವರು ವಿನಾಶವನ್ನೇ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ‌ ಕರೆ ಬಂದಿರುವುದನ್ನು ಸೂಕ್ತ ತನಿಖೆ ಮಾಡಲಾಗುವುದು. ಅವರಿಗೆ ಯಾರು ಮಾರ್ಗದರ್ಶನ ನೀಡಿದ್ದಾರೆ ಯಾತಕ್ಕೆ ಮಾಡಿದ್ದಾರೆ ಅವರ ಹಿನ್ನೆಲೆ ಏನು ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.

Similar News