ಚಿಕ್ಕಮಗಳೂರು: ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಸಂಚಾಲಕನ ಮನೆಗೆ ಐ.ಟಿ. ದಾಳಿ‌

Update: 2023-01-16 08:12 GMT

ಚಿಕ್ಕಮಗಳೂರು: ಕಾಫಿನಾಡಲ್ಲಿ  ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.

8 ಕಾರಿನಲ್ಲಿ ಬಂದಿರುವ ಐ.ಟಿ. ಅಧಿಕಾರಿಗಳು, ನಗರದ ಷರಿಫ್ ಬಡಾವಣೆಯಲ್ಲಿರುವ ಅಕ್ಮಲ್ ಅವರ ನಿವಾಸದ ಮೇಲೆ ನಡೆಸಿದ್ದು, ಆ ಬಳಿಕ ಅಕ್ಮಲ್ ಒಡೆತನದ ಕಾಫಿ ಕ್ಯೂರಿಂಗ್ ಮೇಲೂ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ ಅಕ್ಮಲ್ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

Similar News