ಈ ಸರಕಾರದಲ್ಲಿ ಸೀಡಿ ರಾಜಕಾರಣ ಹೆಚ್ಚಾಗಿದೆ: ಸಭಾಪತಿ ಬಸವರಾಜ ಹೊರಟ್ಟಿ ಬೇಸರ

Update: 2023-01-17 11:44 GMT

ಹುಬ್ಬಳ್ಳಿ: 'ಜನಪ್ರತಿನಿಧಿಗಳಾದವರು ಇನ್ನೊಬ್ಬರಿಗೆ ಮಾದರಿಯಾಗಿರಬೇಕು. ಅದು ಬಿಟ್ಟು ಸೀಡಿ ಮಾಡ್ತೀನಿ, ಇತ್ಯಾದಿ ಮಾಡ್ತೀನಿ ಎಂದು ಹೇಳಿಕೆಗಳನ್ನು ಕೊಡುವುದು ಸರಿಯಾದುದಲ್ಲ. ಇಂಥ ಹೇಳಿಕೆಗಳು ಸಾರ್ವಜನಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ವಿಚಾರ ಮಾಡಬೇಕು' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಯತ್ನಾಳ್ ನಡುವಿನ ವೈಯಕ್ತಿಕ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದರು. 

'ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಎಲ್ಲ ಸರ್ಕಾರದಲ್ಲೂ ಸಿ.ಡಿ ರಾಜಕಾರಣಗಳಿದ್ದವು. ಆದರೆ ಈ ಸರ್ಕಾರದಲ್ಲಿ ಅದು ಹೆಚ್ಚಾಗಿದೆ. ಶಿಸ್ತು ಇಲ್ಲ ಅಂದ್ರೆ ಹೀಗಾಗುತ್ತೆ' ಎಂದು ಬೇಸರ ವ್ಯಕ್ತಪಡಿಸಿದರು.  

''ಬಿಜೆಪಿಗೆ ಪಕ್ಷಾಂತರ ಮಾಡಿದ್ದಕ್ಕೆ ನಮಗೇನು ಬೇಸರವಿಲ್ಲ. ಶಿಕ್ಷಕರು ಮತ್ತು ಇತರರು ಒತ್ತಾಯ ಮಾಡಿದ್ದಾರೆ. ಅದರ ಮೇರೆಗೆ ಬಿಜೆಪಿ ಸೇರಿದ್ದೇನೆ. ಜೆಡಿಎಸ್ ಮುಖಂಡರ ಮನವೊಲಿಕೆ ಮಾಡಿಯೇ ನಾನು ಬಿಜೆಪಿಗೆ ಹೋಗಿದ್ದೇನೆ. ಸಭಾಪತಿ ಆಗಿರೋದ್ರಿಂದ ನಾನು ಯಾರ ಮೇಲೂ ಕೆಸರು ಎರಚೋಕೆ ಹೋಗಿಲ್ಲ' ಎಂದರು.

Similar News