ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಾರ್ಷಿಕ ಪ‍್ರಶಸ್ತಿ ಘೋಷಣೆ: 90 ನ್ಯಾಯಾಧೀಶರಿಗೆ ‘ನ್ಯಾಯಾಂಗ ಕನ್ನಡ ಪ್ರಶಸ್ತಿ'

Update: 2023-01-17 16:55 GMT

ಬೆಂಗಳೂರು, ಜ.17: ಕನ್ನಡದಲ್ಲಿ ತೀರ್ಪು ನೀಡಿದ 90 ನ್ಯಾಯಾಧೀಶರು, ಕನ್ನಡದಲ್ಲಿ ವಾದ ಮಂಡಿಸಿದ 12 ಸರಕಾರಿ ಅಭಿಯೋಜಕರು ಹಾಗೂ 18 ವಕೀಲರುಗಳು ಸೇರಿ ಒಟ್ಟು 120 ಕನ್ನಡ ಸಾಧಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ನ್ಯಾಯಾಂಗ ಕನ್ನಡ ಪ್ರಶಸ್ತಿ’ ಘೋಷಣೆ ಮಾಡಿದೆ. 

ಕಳೆದ ಒಂಭತ್ತು ವರ್ಷಗಳಲ್ಲಿ 477 ನ್ಯಾಯಾಧೀಶರು, 29 ಸರಕಾರಿ ಅಭಿಯೋಜಕರು ಹಾಗೂ 20 ವಕೀಲರುಗಳು ಈ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ತಲಾ 10 ಸಾವಿರ ನಗದು ಬಹುಮಾನ ಮತ್ತು ಫಲಕಹೊಂದಿದೆ. 

ಜ.22ರಂದು ಸಂಜೆ 4.30ಕ್ಕೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. 

ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್‍ರವರು ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಭಾಗವಹಿಸಲಿದ್ದಾರೆ. ಸಚಿವ ವಿ.ಸುನಿಲ್ ಕುಮಾರ್‍ರವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶಾಸಕ ರಿಝ್ವಾನ್ ಹರ್ಷದ್ ರವರು ವಹಿಸುವರು. ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ವಿಶ್ರಾಂತ ಕುಲಪತಿಗಳು, ಬೆಂಗಳೂರು ರವರು ಶುಭನುಡಿಗಳನ್ನಾಡಲಿದ್ದಾರೆ. 

Similar News