ಕಲಬುರಗಿ ಜಿಲ್ಲೆಯಲ್ಲಿ ಲಘು ಭೂಕಂಪನ

Update: 2023-01-18 15:02 GMT

ಕಲಬುರಗಿ, ಜ. 18: ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ಇತ್ತು.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಬೆಳಗ್ಗೆ 9.48ರಿಂದ 10ಗಂಟೆ ಅವಧಿಯಲ್ಲಿ ಕಂಪನದ ಅನುಭವವಾಗಿದೆ. ಕಂಪನದಿಂದ ಜನ ಗಾಬರಿಗೊಂಡಿದ್ದು, ಏನಾಗಿದೆ ಎಂಬುದು ಗೊತ್ತಾಗಲಿಲ್ಲ ಎಂದಿದ್ದಾರೆ. ಸುಮಾರು 10 ಸೆಕೆಂಡ್‍ವರೆಗೆ ಭೂಮಿ ಕಂಪಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಲಘು ಭೂಮಿ ಕಂಪಿಸಿದ ಬಗ್ಗೆ ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತನ್ನ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದೆ.

ನಾಳೆ ಮೋದಿ ಭೇಟಿ: ಪ್ರಧಾನಿ ಮೋದಿ ಹಕ್ಕುಪತ್ರಗಳನ್ನು ವಿತರಿಸಲು ಜ.19ರಂದು ಭೂಕಂಪನದ ಕೇಂದ್ರ ಬಿಂದು ಸಮೀಪವೇ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ದತೆಗಳು ಭರದಿಂದ ನಡೆದಿವೆ. ಈಗಾಗಲೇ ವಿಶೇಷ ಭದ್ರತಾ ಪಡೆ ಆಗಮಿಸಿದೆ.

Similar News