VIDEO- ಅಲ್ಪಸಂಖ್ಯಾತರೊಂದಿಗೆ ವಿಶ್ವಾಸದ ಹೆಜ್ಜೆ ಇಡುವಂತೆ ಮೋದಿ ಸಲಹೆ ನೀಡಿದ್ದಾರೆ: ಬಿ.ಎಸ್. ಯಡಿಯೂರಪ್ಪ

Update: 2023-01-18 17:16 GMT

ಶಿವಮೊಗ್ಗ:   ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ  ದೇಶದ ಹಾಗೂ ರಾಜ್ಯಗಳ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆಯಾಗಿದ್ದು, ಅಲ್ಪಸಂಖ್ಯಾತ ಮುಸ್ಲಿಮ್ ಬಂಧುಗಳನ್ನು ಜೊತೆಗೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆ ಗೆಲ್ಲಲು ಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮೋದಿಯವರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾರ್ಗದರ್ಶನ ಮಾಡಿದರು ಎಂದರು.

ರಾಜ್ಯದಲ್ಲಿ  ಪಕ್ಷವನ್ನು ಬಲಪಡಿಸಿ   ಅಧಿಕಾರಕ್ಕೆ ನಾವು ಬರಲೇಬೇಕು.ಮೋದಿ, ಅಮಿತ್ ಶಾ, ನಡ್ಡಾ ಅವರು ಹೆಚ್ಚು ಸಮಯ ರಾಜ್ಯಕ್ಕೆ ಕೊಡಲಿದ್ದಾರೆ. 140 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಕಾರ್ಯಪ್ರವೃತ್ತರಾಗುತ್ತೇವೆ. ಶಾಸಕರು, ಕಾರ್ಯಕರ್ತರು ಹೆಚ್ಚು ಕೆಲಸ ಮಾಡಬೇಕು.ಎಲ್ಲರಲ್ಲೂ ವಿಶ್ವಾಸ ಮೂಡಿಸಬೇಕು ಎಂದರು.

ಈಗಾಗಲೇ ನಾವು ಕೇಂದ್ರದ ನಾಯಕರ ಜೊತೆ ಚೆನ್ನಾಗಿ ಇದ್ದೇವೆ. ನಮ್ಮ ಬಗ್ಗೆ ಗೌರವ, ವಿಶ್ವಾಸ ಇದೆ. ಬರುವ ದಿನ ಇನ್ನಷ್ಟು ಸಂಪರ್ಕ ಮಾಡಲು ಪ್ರಧಾನಿ ಅಪೇಕ್ಷೆಯಂತೆ ಕೆಲಸ ಮಾಡುತ್ತೇವೆ ಎಂದರು.

ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆಗೆ ಪ್ರಧಾನಿ ಸಮಯ ಕೊಡುತ್ತಾರೆ. ನಾಲ್ಕೈದು ದಿನದಲ್ಲಿ ದಿನಾಂಕ ನಿಗದಿಯಾಗುತ್ತದೆ. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ ಎಂದರು.

Full View

Similar News