ಪಿಎಸ್‌ಐ ಹಗರಣ: ಆರ್.ಡಿ. ಪಾಟೀಲ್ ಮನೆ ಮೇಲೆ ಈ.ಡಿ ದಾಳಿ
Update: 2023-01-20 09:35 IST
ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿಗಳಾದ ಆರ್.ಡಿ.ಪಾಟೀಲ, ದಿವ್ಯಾ ಹಾಗರಗಿ ಸೇರಿ ಐವರು ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಗುರುವಾರ ದಾಳಿ ಮಾಡಿ, ದಾಖಲೆಗಳು ಪರಿಶೀಲಿಸಿದರು.
ಬೆಳಗ್ಗೆಯೇ ಎರಡು ತಂಡಗಳಲ್ಲಿ ಆಗಮಿಸಿದ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.