BSY, ಈಶ್ವರಪ್ಪ ಜೊತೆಗೆ ಬಿಜೆಪಿಯ "ಕಿಕ್ ಔಟ್ ಲಿಸ್ಟ್"ಗೆ ಸೇರ್ಪಡೆಯಾದರೇ ಶ್ರೀರಾಮುಲು?: ಕಾಂಗ್ರೆಸ್

Update: 2023-01-20 07:00 GMT

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಜೊತೆಗೆ ಸಾರಿಗೆ ಮತ್ತು ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರೂ ಬಿಜೆಪಿಯ "ಕಿಕ್ ಔಟ್ ಲಿಸ್ಟ್"ಗೆ ಸೇರ್ಪಡೆಯಾದರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಶ್ರೀರಾಮುಲು ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ವಿಚಾರ ಹಾಗೂ ಇತ್ತೀಚೆಗೆ ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಸೇರುವಂತೆ ಕರೆ ನೀಡಿ ಶ್ರೀರಾಮುಲು ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದಾರೆನ್ನಲಾದ ವಿಚಾರವನ್ನೂ ಉಲ್ಲೇಖಿಸಿ ಬಿಜೆಪಿಯನ್ನು ತರಾಟೆಗೈದಿದೆ. 

ಅಲ್ಲದೇ,  ಯಾದಗಿರಿ ಹಾಗೂ ಕಲಬುರಗಿಯಲ್ಲಿ ನಡೆದ ಪ್ರಧಾನಿ  ಮೋದಿ ಅವರ ಕಾರ್ಯಕ್ರಮಕ್ಕೆ ಶ್ರೀರಾಮುಲು ಅವರನ್ನ ಆಹ್ವಾನಿಸಿಲ್ಲ, ಹೀಗಾಗಿ  BSY, ಈಶ್ವರಪ್ಪ, ಶೆಟ್ಟರ್ ಜೊತೆಗೆ ಈಗ ಶ್ರೀ ರಾಮುಲು ಅವರೂ ಬಿಜೆಪಿಯ "ಕಿಕ್ ಔಟ್ ಲಿಸ್ಟ್"ಗೆ ಸೇರ್ಪಡೆಯಾದರೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಇದನ್ನೂ ಓದಿ: ಜನಾರ್ದನ ರೆಡ್ಡಿ ಪಕ್ಷಕ್ಕೆ ಆಹ್ವಾನಿಸಿ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಸಚಿವ ಶ್ರೀರಾಮುಲು?

''ಆಹ್ವಾನ ಬಂದಿಲ್ಲ, ಅದಕ್ಕೆ ಹೋಗಿಲ್ಲ''

''ಯಾದಗಿರಿ ಹಾಗೂ ಕಲಬುರಗಿಯಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ. ಅದಕ್ಕೆ ಹೋಗಿಲ್ಲ''

ಬಿ.ಶ್ರೀರಾಮುಲು, ಸಾರಿಗೆ ಮತ್ತು ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ

Similar News