ನಾನು ಈಗ ಮಂತ್ರಿ ಆಗುವ ಆಸೆ ಬಿಟ್ಟಿದ್ದೇನೆ: ಕೆ.ಎಸ್.ಈಶ್ವರಪ್ಪ

Update: 2023-01-20 11:34 GMT

ಶಿವಮೊಗ್ಗ, ಜ.20: 'ನಾನು ಸರಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ಸಿದ್ಧನಿಲ್ಲ' ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾ

ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈಗಾಗಲೇ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾಕಷ್ಟು ಜನರು ನಾನು ಸಚಿನಾಗಬೆಂಕೆಂದು ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದನ್ನೇ ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದೆ. ಅವರು ರಾಷ್ಟ್ರೀಯ ನಾಯಕರ ಬಳಿ ಮಾತನಾಡುವ ಭರವಸೆ ನೀಡಿದ್ದರು. 224 ಶಾಸಕರೂ ಮಂತ್ರಿ ಆಗಲು ಆಗುವುದಿಲ್ಲ. ಪಕ್ಷದ ಯೋಚನೆ ಬೇರೆ ಇರಬಹುದು. ಈಗ ನಾನು ಆಸೆ ಬಿಟ್ಟಿದ್ದೇನೆ'' ಎಂದರು.

''ಆಡಳಿತ ನಡೆಸುವ ವ್ಯವಸ್ಥೆ ಸುಲಭವಾಗಿ ನಡೆಯುವುದಿಲ್ಲ. ಅವರಿಗೆ ಏನೇನು ಪರಿಸ್ಥಿತಿಗಳಿವೆಯೋ ನನಗೆ ಗೊತ್ತಿಲ್ಲ. ಹಾಗಾಗಿ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಇನ್ನೊಂದು ಸಮಸ್ಯೆ ಮಾಡಲು ನಾನು ಸಿದ್ಧನಿಲ್ಲ. ಸಚಿವನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ ಎಂದು ತಿಳಿಸಿದ್ದಾರೆ. ನಾನೇ ಮಂತ್ರಿಯಾಗಬೇಕು ಎನ್ನುವ ಮೂಲಕ ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ನಾನು ಇಷ್ಟಪಡಲ್ಲ ಎಂದ ಅವರು ಈ ನಿಟ್ಟಿನಲ್ಲಿ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ'' ಎಂದರು.

ಶ್ರೀಕೃಷ್ಣ ಪರಮಾತ್ಮನಿಗಿಂತಲೂ ಹೆಚ್ಚಿನ ತಂತ್ರಗಾರಿಕೆ ದೆಹಲಿ ನಾಯಕರು ಮಾಡುತ್ತಿದ್ದಾರೆ. ನ್ಯಾಯಬದ್ಧ ತಂತ್ರಗಾರಿಕೆಯಿಂದಲೇ ಎಲ್ಲೆಡೆ ಬಿಜೆಪಿ ಗೆಲ್ಲುತ್ತಿದೆ, ಅನೇಕ ಕಡೆ ಹೊಸ ಹೊಸ ಮುಖಗಳಿಗೆ ಟಿಕೆಟ್ ನೀಡಿದರು. ಹಲವೆಡೆ ಹಿಂದಿನ ಎಂಎಲ್‌ಎಗಳಿಗೆ ಟಿಕೆಟ್ ನೀಡಿಲ್ಲ. ಅಲ್ಲಿಯು ಸರ್ಕಾರಗಳು ಬಂದಿವೆ. ಹಾಗಾಗಿ ದೆಹಲಿ ನಾಯಕರು ತಂತ್ರಗಾರಿಕೆ ಮಾಡಿದ ಮೇಲಷ್ಟೆ ಗೊತ್ತಾಗುತ್ತದೆ ಎಂದರು.

Similar News