×
Ad

ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ: ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ PSI ಹಗರಣದ ಆರೋಪಿ

Update: 2023-01-21 17:55 IST

ಕಲಬುರಗಿ: ಇತ್ತೀಚೆಗೆ ಸಿಐಡಿ ಅಧಿಕಾರಿಗಳ ದಾಳಿ ವೇಳೆ ಮನೆಯಿಂದ ಪರಾರಿಯಾಗಿದ್ದಾನೆನ್ನಲಾದ ಪಿಎಸ್​ಐ ಹಗರಣದ ಪ್ರಮುಖ ಆರೋಪಿ ಆರ್​ಡಿ ಪಾಟೀಲ್ ​ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷಗೊಂಡಿದ್ದು, ವಿಡಿಯೋ ಒಂದನ್ನು ಹರಿಬಿಟ್ಟಿದ್ದಾನೆ. 

'ಸಿಐಡಿ ಅಧಿಕಾರಿಗಳ ಸುದೀರ್ಘ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಸಿಐಡಿ ಅಧಿಕಾರಿಗಳು ಮನೆಗೆ ಬಂದಾಗ ನಾನು ಹೊರಗಡೆ ಹೋಗಿದ್ದೆ, ನಾನು ಯಾವುದೇ ಅಧಿಕಾರಿಯನ್ನು ತಳ್ಳಿ ಓಡಿ ಹೋಗಿದ್ದೇನೆ ಎಂಬುದು ಶುದ್ಧ ಸುಳ್ಳು' ಎಂದು ಆರ್.ಡಿ.ಪಾಟೀಲ್ ಹೇಳಿದ್ದಾನೆ. 

ವೀಡಿಯೋದಲ್ಲಿ ಏನಿದೆ?

ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿರುವ ಆರ್‌ಡಿ ಪಾಟೀಲ್‌, ವಿಶೇಷವಾಗಿ ನನ್ನ ಅಭಿಮಾನಿಗಳಿಗೆ ನಿಮ್ಮ ಆರ್‌ಡಿ ಪಾಟೀಲ್‌ ಮಾಡುವ ನಮಸ್ಕಾರಗಳು. ಕಳೆದ 9 ತಿಂಗಳಿನಿಂದ ರಾಜಕೀಯ ಕುತಂತ್ರದಿಂದ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ಸಾಮಾಜಿಕ ಸೇವೆ ನೋಡಿ ರಾಜಕೀಯಕ್ಕೆ ಬರಬಹುದೆಂದು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ.

ನಾನು ಅಫಜಲಪುರ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಯತ್ನಿಸಿಲ್ಲ. ನನ್ನನ್ನ ಈ ಪ್ರಕರಣದಲ್ಲಿ ಸಿಲುಕಿಸಿದ ಜನರಿಗೆ ಒಂದು ಮಾತು ಹೇಳುತ್ತೇನೆ. ನಮ್ಮ ಅಫಜಲಪುರ ಕ್ಷೇತ್ರದ ಜನತೆ ಬಯಸಿದರೆ 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ. ಸಿಐಡಿಯವರು ನನ್ನನ್ನ ಸುದೀರ್ಘ ವಿಚಾರಣೆ ನಡೆಸಿದ್ದು, ಸಂಪೂರ್ಣ ಸಹಕಾರ ನೀಡಿದ್ದೇನೆ.

ಸಿಐಡಿಯವರು ಮನೆಗೆ ಬಂದಾಗ ನಾನು ಹೊರಗಡೆ ಹೋಗಿದ್ದೆ. ನಾನು ಸಿಐಡಿ ಅಧಿಕಾರಿಯನ್ನ ತಳ್ಳಿ ಓಡಿಹೋಗಿದ್ದೀನಿ ಅನ್ನೊದು ಶುದ್ಧ ಸುಳ್ಳು. ನಾನು ಓಡಿಹೋಗಿದ್ದೇನೆ ಅಂತಾ ಮಾಧ್ಯಮಗಳಲ್ಲಿನ ವರದಿ ಸತ್ಯಕ್ಕೆ ದೂರ. ನಾನು ಇಲಾಖೆ ವಿರುದ್ಧ ನಡೆದುಕೊಳ್ಳುವ ವ್ಯಕ್ತಿಯೇ ಅಲ್ಲ. ಈ ನೆಲದ ಕಾನೂನಿಗೆ ಗೌರವ ಕೊಡುವ ಮನುಷ್ಯನಾಗಿದ್ದೇನೆ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: ಸಿಐಡಿ ಅಧಿಕಾರಿಗಳ ದಾಳಿ ವೇಳೆ PSI ಹಗರಣ ಆರೋಪಿ ಆರ್.ಡಿ. ಪಾಟೀಲ್ ಪರಾರಿ

Full View

Similar News