×
Ad

ಶಾಸಕ ಯತ್ನಾಳ್ ರನ್ನೇ ಹೊರಗಿಟ್ಟು ವಿಜಯಪುರದಲ್ಲಿ ಬಿಜೆಪಿ ಸಮಾವೇಶ: ಕಾಂಗ್ರೆಸ್ ಟೀಕೆ

Update: 2023-01-21 20:24 IST

ಬೆಂಗಳೂರು: 'ಬಿಜೆಪಿಯ ಭ್ರಷ್ಟ ಸಂಕಲ್ಪ ಯಾತ್ರೆಯ ಸಮಾವೇಶ ವಿಜಯಪುರದಲ್ಲಿ ನಡೆದಿದ್ದರೂ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸುಳಿವಿಲ್ಲ' ಎಂದು ಕಾಂಗ್ರೆಸ್ ಹೇಳಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಆ ಕ್ಷೇತ್ರದ ಶಾಸಕರನ್ನೇ ಹೊರಗಿಟ್ಟು ಸಮಾವೇಶ ನಡೆಸುವ ಮೂಲಕ #BJPvsBJP ಕದನ ಮತ್ತೊಂದು ಮಜಲಿಗೆ ತಲುಪಿ ನಿರಾಣಿ ಕೈ ಮೇಲಾಗಿದೆ. ನಳಿನ್ ಕುಮಾರ್  ಅವರೇ, ಬಿಜೆಪಿಗರ ನಾಲಿಗೆಯೇ ಚಪ್ಪಲಿಗಳಂತಾಗಿವೆ ಅಲ್ಲವೇ'' ಎಂದು ತಿರುಗೇಟು ನೀಡಿದೆ. 

''ಕಟೀಲ್ ಹೇಳಿದಂತೆ ಬಿಜೆಪಿ ಸಭೆಯಲ್ಲಿ ಚಪ್ಪಲಿಗಳು ಅವರಲ್ಲಿಯೇ ಇರುತ್ತವೆ. ಯಾಕೆಂದರೆ ಅವರ ಚಪ್ಪಲಿಯಿಂದ ಅವರೇ ಹೊಡೆದುಕೊಳ್ಳಲಿ ಎಂದು. ಮೂರುವರೇ ವರ್ಷದಿಂದ ಏನೂ ಕೆಲಸ ಮಾಡದಿರುವುದಕ್ಕೆ'' ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಬಿಜೆಪಿ ಸಭೆ ಮಾತ್ರ ಶಿಸ್ತಿನಿಂದ ನಡೆಯುತ್ತದೆ: ನಳಿನ್ ಕುಮಾರ್ ಕಟೀಲ್

Similar News