ಸಾಗರ: ಗೃಹರಕ್ಷಕ ದಳದ ಕಚೇರಿಗೆ ನಿವೇಶನ ಮಂಜೂರು ಮಾಡುವಂತೆ ಮನವಿ

Update: 2023-01-22 09:02 GMT

ಸಾಗರ: ಗೃಹರಕ್ಷಕ ದಳದ ಕಚೇರಿಗೆ ನಿವೇಶನ ಅಥವಾ ಕೊಠಡಿ ಮಂಜೂರು ಮಾಡುವಂತೆ ಗೃಹ ರಕ್ಷಕ ದಳದ ವತಿಯಿಂದ ಶಾಸಕ ಎಚ್.ಹಾಲಪ್ಪ ಹರತಾಳು ಅವರಿಗೆ ರವಿವಾರ ಮನವಿ ಸಲ್ಲಿಸಲಾಯಿತು.

ಗೃಹ ರಕ್ಷಕ ದಳವು ಸರ್ಕಾರದ ಅಂಗ ಸಂಸ್ಥೆಯಾಗಿದ್ದು, 1967ರಿಂದ ಈತನಕ ಸಾಗರದಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಆದೇಶದಂತೆ ತುರ್ತು ಸಂದರ್ಭ, ಚುನಾವಣೆ, ಜಾತ್ರೆ, ಪ್ರವಾಹ ಇನ್ನಿತರ ಸಂದರ್ಭದಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿ ಅಹೋರಾತ್ರಿ ರಕ್ಷಣಾ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಾಗರದಲ್ಲಿ ಗೃಹ ರಕ್ಷಕ ದಳ ವಿಶೇಷವಾಗಿ ಕೆಲಸ ಮಾಡುತ್ತಿದ್ದು, ತುರ್ತು ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅಂದಿನಿಂದ ಇಂದಿನವರೆಗೂ ಗೃಹ ರಕ್ಷಕ ದಳ ಕಚೇರಿ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಪದೇಪದೇ ಕಚೇರಿ ಬದಲಾವಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈತನಕ ನಮಗೆ ಸ್ವಂತ ಕಚೇರಿಯಾಗಲೀ, ನಿವೇಶನವಾಗಲೀ ಇಲ್ಲ. ಆದ್ದರಿಂದ ಗೃಹ ರಕ್ಷಕ ದಳದ ಚಟುವಟಿಕೆಗಳನ್ನು ನಡೆಸಲು ನಿವೇಶನ ಅಥವಾ ಕೊಠಡಿಯೊಂದು ಮಂಜೂರು ಮಾಡಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಘಟಕಾಧಿಕಾರಿ ರಾಘವೇಂದ್ರ ಎಂ., ಪ್ರಮುಖರಾದ ಸಿದ್ದರಾಮಯ್ಯ, ಚನ್ನವಿರೇಶ್, ಪಿ.ಬಾಬು, ರಾಯಲ್ ಸಂತೋಷ್, ಸುನೀಲ್, ಮಹೇಶ್, ನಾಗರಾಜ್ ಇನ್ನಿತರರು ಹಾಜರಿದ್ದರು.

Similar News