×
Ad

‘ಭಾರತ್ ಜೋಡೊ’ ಯಾತ್ರೆ ಮೂಲಕ ದ್ವೇಷ-ಹಿಂಸಾಚಾರದ ವಿರುದ್ಧ ರಾಹುಲ್ ಹೋರಾಟ: ಎಚ್.ಡಿ.ದೇವೇಗೌಡ ಶ್ಲಾಘನೆ

Update: 2023-01-24 20:13 IST

ಬೆಂಗಳೂರು, ಜ.24: ‘ಭಾರತ್ ಜೋಡೊ’ ಯಾತ್ರೆಯ (bharatjodo)ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ದ್ವೇಷ ಮತ್ತು ಹಿಂಸಾಚಾರ’ದ ವಿರುದ್ಧ ಹೋರಾಡುವ ಮೂಲಕ ಜನ ಸಾಮಾನ್ಯರಲ್ಲಿ ಸಾಮರಸ್ಯದ ಸಂದೇಶವನ್ನು ಹರಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ಲಾಘಿಸಿದ್ದಾರೆ.

ಜ.30ರಂದು ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮಗೆ ನೀಡಿರುವ ಆಹ್ವಾನಕ್ಕೆ ಧನ್ಯವಾದ ಅರ್ಪಿಸಿರುವ ಅವರು, ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನನ್ನ ಶುಭ ಹಾರೈಕೆಗಳನ್ನು ರಾಹುಲ್ ಗಾಂಧಿಗೆ ತಿಳಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ. 

‘ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದ ದಿನದಂದು ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ಸೂಕ್ತ. ಕಾರ್ಯಕ್ರಮಕ್ಕೆ ಖುದ್ದು ಹಾಜರಾಗಲು ನನಗೆ ಸಾಧ್ಯವಾಗದೆ ಇರಬಹುದು. ಆದರೆ ನನ್ನ ಶುಭ ಹಾರೈಕೆಗಳು ರಾಹುಲ್ ಗಾಂಧಿಯವರಿಗಿದೆ. ಅವರು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 3,500 ಕಿಮೀ ನಡೆದು ಜನರಲ್ಲಿ ಸಾಮರಸ್ಯದ ಸಂದೇಶವನ್ನು ಹರಡಿದ್ದಾರೆ ಎಂದು ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Similar News