2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ ರಶೀದ್ ಅಹ್ಮದ್ ಖಾದ್ರಿ ಸಹಿತ ಐವರಿಗೆ ಪದ್ಮಶ್ರೀ

ಎಸ್ಸೆಂ ಕೃಷ್ಣಗೆ ಪದ್ಮ ವಿಭೂಷಣ, ಸುಧಾ ಮೂರ್ತಿ, ಎಸ್. ಎಲ್ ಭೈರಪ್ಪಗೆ ಪದ್ಮ ಭೂಷಣ

Update: 2023-01-25 17:20 GMT

ಹೊಸದಿಲ್ಲಿ,ಜ.25: ಗಣರಾಜ್ಯ ದಿನದ ಮುನ್ನಾದಿನವಾದ ಬುಧವಾರ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಮತ್ತು ಸಾಮಾಜಿಕ ಕಾರ್ಯಕರ್ತೆ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಗಳು ಒಲಿದಿವೆ.

ಈ ವರ್ಷ 106 ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆರು ಜನರು ಪದ್ಮವಿಭೂಷಣ,ಒಂಬತ್ತು ಜನರು ಪದ್ಮಭೂಷಣ ಮತ್ತು 91 ಜನರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಪಶಸ್ತಿ ವಿಜೇತರ ಪಟ್ಟಿಯಲ್ಲಿ 19 ಮಹಿಳೆಯರಿದ್ದು,ಇಬ್ಬರು ವಿದೇಶಿಯರು/ಎನ್ನಾರೈ/ಪಿಐಒ/ಒಸಿಐ ವರ್ಗಕ್ಕೆ ಸೇರಿದ್ದಾರೆ. ಮರಣೋತ್ತರವಾಗಿ ಏಳು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕಕ್ಕೆ ಒಟ್ಟು ಎಂಟು ಪ್ರಶಸ್ತಿಗಳು ಸಿಕ್ಕಿದ್ದು, ಖಾದರ್ ವಲಿ ದುಡೆಕಳ (ವಿಜ್ಞಾನ ಮತ್ತು ಇಂಜಿನಿಯರಿಂಗ್),ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ( ಕಲೆ), ಶಾ ರಶೀದ್ ಅಹ್ಮದ್ ಖಾದ್ರಿ (ಕಲೆ) ಮತ್ತು ಎಸ್.ಸುಬ್ಬರಾಮನ್ (ಪುರಾತತ್ವ) ಅವರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಮಾರ್ಚ್/ಎಪ್ರಿಲ್ ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ.

ಗುಜರಾತಿನ ಬಾಲಕೃಷ್ಣ ದೋಶಿ ( ವಾಸ್ತುಶಿಲ್ಪ),ಪ.ಬಂಗಾಳದ ದಿಲೀಪ ಮಹಾಲನಬೀಸ್ (ಔಷಧಿ),ಮುಲಾಯಂ ಸಿಂಗ್ ಯಾದವ್ (ರಾಜಕೀಯ )ಸೇರಿದಂತೆ ಏಳು ಜನರಿಗೆ ಮರಣೋತ್ತರವಾಗಿ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

[ಶಾ ರಶೀದ್ ಅಹ್ಮದ್ ಖಾದ್ರಿ]

[ರಾಣಿ ಮಾಚಯ್ಯ]

Similar News