ತಿ.ನರಸೀಪುರ: ಮತ್ತೊಂದು ಚಿರತೆ ಬೋನಿಗೆ, ನಿಟ್ಟುಸಿರು ಬಿಟ್ಟ ಜನ

ಚಿರತೆ ದಾಳಿಗೆ ತಾಲೂಕಿನಲ್ಲಿ 3 ತಿಂಗಳಲ್ಲಿ ನಾಲ್ಕು ಸಾವು

Update: 2023-01-26 07:38 GMT

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಕೊಳತ್ತೂರು ಪಂಚಾಯಿತಿಯ ನರಗ್ಯಾತನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ.

ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ನಾಲ್ವರನ್ನು ಬಲಿ ಪಡೆದು ತಾಲೂಕಿನ ಜನರಲ್ಲಿ ಆತಂಕ ಉಂಟುಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಚಿರತೆಗಳನ್ನು ಸೆರಯಿಡಿಯುವಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.

ನಿನ್ನೆಯಷ್ಟೇ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅದೇಗೆ ಚಿರತೆ ಹಿಡಿಯುತ್ತೇರೊ ನಮಗೆ ಗೊತ್ತಿಲ್ಲ ಒಟ್ಟಿನಲ್ಲಿ ಚಿರತೆ ಹಾವಳಿಯನ್ನು ತಪದಪಿಸಬೇಕು ಎಂದು ಆದೇಶವನ್ನು ಮಾಡಿದ್ದರು. ಇದರಿಂದ ಎಚ್ಚೆತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಆಯಾ ಗ್ರಾಮಗಳು ಮತ್ತು ತೋಟ, ಹೊಲ ಮತ್ತು ಗದ್ದೆಗಳಲ್ಲಿ ಬೋನುಗಳನ್ನು ಇಟ್ಟಿದ್ದರು.

ಇದರ ಬೆನ್ನಲ್ಲೇ ಚಿರತೆಯೊಂದು ಸೆರೆಯಾಗೊರುವುದು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಇನ್ನೂ ಅನೇಕ ಚಿರತೆ ಮತ್ತು ಮರಿಗಳು ಇವೆ ಎಂಬ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಇನ್ನಷ್ಟು ಚಿರತೆಗಳ ಸೆರೆಗೆ ಅರಣ್ಯ ಇಲಾಖೆಯವರು ಕಾರ್ಯಪ್ರವೃತ್ತರಾಗಿದ್ದಾರೆ. 

ಇದನ್ನೂ ಓದಿತಿ.ನರಸೀಪುರ: ಚಿರತೆ ದಾಳಿಗೆ ಬಾಲಕ ಬಲಿ

Similar News