ಶಿಕ್ಷಕರಿಗೆ ಸಿಗುವ ಗೌರವ ಯಾರಿಗೂ ಇಲ್ಲ: ಶಾಸಕ ಅಪ್ಪಚ್ಚುರಂಜನ್

ಕೊಡ್ಲಿಪೇಟೆ: ಹಳೆಯ ವಿದ್ಯಾರ್ಥಿಗಳಿಂದ ಬ್ಯಾಡಗೊಟ್ಟ ಸರ್ಕಾರಿ ಶಾಲೆಯಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ

Update: 2023-01-26 08:10 GMT

ಕೊಡ್ಲಿಪೇಟೆ :  ಶಿಕ್ಷಕರಿಗೆ ಸಿಗುವಂತಹ ವಿಶೇಷ ಗೌರವ ಎಷ್ಟೇ ದೊಡ್ಡ ಹುದ್ದೆಯಲ್ಲಿರುವರಿಗೂ ಸಿಗುವುದಿಲ್ಲ ಎಲ್ಲಿ ಹೋದರು ಶಿಕ್ಷಕರಿಗೆ ವಿಶೇಷ ಗೌರವ ಸಿಗುತ್ತದೆ  ಗುರುಗಳನ್ನು ಗೌರವಿಸುವುದು ಉತ್ತಮ ಕಾರ್ಯವಾಗಿದೆ, ವಿದ್ಯಾದೇಗುಲಕ್ಕೆ ವಿದ್ಯಾರ್ಜನೆಗೆ  ಬರುವಾಗ ದೇವಸ್ಥಾನ ,ಮಸೀದಿ ,ಚರ್ಚು ಗಳಿಗೆ ಹೋಗುವಂತೆ ಶುಭ್ರವಾಗಿ ಬರಬೇಕು ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿದ್ದಾರೆ. 

ಬ್ಯಾಡಗೊಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,  ನಾವು ಓದಿದ ಶಾಲೆ ವಿದ್ಯೆ ಕಲಿಸಿದ ಶಿಕ್ಷಕರು ಹಾಗೂ ತಂದೇ ತಾಯಿಯರನ್ನು ಯಾವತ್ತೂ ಮರೆಯಬಾರದೆಂದರು. ಶಾಲೆಗೆ ಸಭಾ ಮಂಟಪ ನಿರ್ಮಿಸಲು ಅನುದಾನ ಒದಿಗಿಸುವುದಾಗಿ ತಿಳಿಸಿದ ಶಾಸಕರು ಶಾಲೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯ ಅಥಿತಿಗಳಾಗಿ ಬಾಗವಹಿಸಿದ ರಾಜಕೀಯ ಯುವ ಮುಖಂಡ ಡಾ.ಮಂಥರ್ ಗೌಡ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಸೇರಿ ತಾವು ಓದಿದ ಶಾಲೆಯನ್ನು ನೆನೆದು ಮುಂದೆ ಬಂದು ಶ್ರಮಿಸುತ್ತಿರುವುದು ಮಾದರಿ ಕಾರ್ಯ ಇದೇ ರೀತಿಯಲ್ಲಿ   ಹಳೆಯ ವಿದ್ಯಾರ್ಥಿಗಳು ಎಲ್ಲಾ ಊರುಗಳಲ್ಲೂ ಮುಂದೆ ಬರಲಿ ಎಂದು  ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆ ಆನಾವರಣ ಗೊಳಿಸಲು ಮಕ್ಕಳಿಗೆ  ಪೋಷಕರ ಪ್ರೊತ್ಸಾಹಿಸಬೇಕು, ಶ್ರಿಮಂತನಿಗಿಂತ ವಿದ್ಯಾವಂತನಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಲಬ್ಯವೆಂದು , ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸಾದ್ಯವಾಗುವ ರೀತಿಯಲ್ಲಿ ನೆರವಾಗುವುದಾಗಿ ತಿಳಿಸಿದರು.

ಒಕ್ಕಲಿಗ ಸಂಘದ ನಿರ್ದೆಶಕ ಸಮಾಜ ಸೇವಕ ಹರಪಳ್ಳಿ ರವೀಂದ್ರರವರು ಮಾತನಾಡಿ, ಗುರುಗಳೇ ದೇವರು. ಪಾಠ ಶಾಲೆಯೇ ಮಂದಿರ ಕಲಿತ ವಿದ್ಯೆಯನ್ನು ಸಮಜಂಸವಾಗಿ ಜೀವನದಲ್ಲಿ ಆಳವಡಿಸಿಕೊಳ್ಳಬೇಕು,ಇವತ್ತಿನ ಯುಗದಲ್ಲಿ ತಂದೆ ತಾಯಿಗೆ ಗುರುಗಳಿಗೆ ನೀಡುವ ಗೌರವ ಕಡಿಮೇಯಾಗುತ್ತಿದೆ ಇದರ ಬಗ್ಗೆ ಹೆಚ್ಚಿಗೆ ಮುತುವರ್ಜಿ ವಹಿಸಿ ಮಕ್ಕಳನ್ನು ಬೆಳೆಸಬೆಕೆಂದರು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೂ ಗುರುವಂದನೆ ಮೂಲಕ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗುರುವಂದನೆ ಸಮಾರಂಭದಲ್ಲಿ ಘನ ಉಪಸ್ಥಿತಿ ವಹಿಸಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠ ರವರು ವಿದ್ಯೆಯಿಂದ ಗೌರವ ಹಾಗೂ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ ಇದರಲ್ಲಿ ಶಿಕ್ಷಕರುಗಳ ಪಾತ್ರ ದೊಡ್ಡದು ಈ ನಿಟ್ಟಿನಲ್ಲಿ ಗುರುಗಳನ್ನು ಸ್ಮರಿಸುತ್ತಿರುವುದು ಉತ್ತಮ ಕಾರ್ಯ, ನಾನು ಕಲಿತ ಶಾಲೆಯ ಸುವರ್ಣ ಮಹೋತ್ಸವದಲ್ಲಿ  ಬಾಗಿಯಾಗಿರುವುದು ನನ್ನ ಸುದ್ವೆವ ಎಂದರು.

ಹಳೆಯ ವಿದ್ಯಾರ್ಥಿ ರಾಜಕೀಯ ಪಕ್ಷದ ರಾಜ್ಯಧ್ಯಕ್ಷ ಕೆ.ಹೆಚ್.ಅಬ್ದುಲ್ ಮಜೀದ್ ಮಾತನಾಡಿ,  ನಮ್ಮ ವಿದ್ಯಾರ್ಥಿ ಜೀವನದಲ್ಲಿ ತಿದ್ದಿ ತೀಡಿ ಉತ್ತಮ ನಾಗರಿಕರನ್ನಾಗಿ ಮಾಡಿದ ಶಿಕ್ಷಕರಿಗೆ ಸುವರ್ಣ ಮಹೋತ್ಸವ ಸಂಬ್ರಮದಲ್ಲಿ ಪ್ರಮುಖವಾಗಿ ಗುರುವಂದನೆ ಸಲ್ಲಿಸುತ್ತಿರುವುದು ಹೆಮ್ಮೆ ಎನಿಸುತ್ತದೆ ಇದು ಹ್ರದಯದಿಂದ ಬಂದತಹ ಗೌರವವಾಗಿದೆ ,ಈ ಕಾರ್ಯಕ್ರಮ ಸವಿನೆನಪಿನಲ್ಲಿ ಉಳಿಯುತ್ತದೆ , ಸರ್ಕಾರಿ ಶಾಲೆಗಳು ಮುಚ್ಚಲ್ಪಡುವಂತಹ ಪರಿಸ್ಥಿತಿ ಎಲ್ಲಾ ಕಡೆಗಳಲ್ಲಿ ಕಂಡುಬರುತ್ತಿದೆ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ಪ್ರಯತ್ನಿಸಬೇಕು ಎಂದರು.

ಮತ್ತೋರ್ವ ಹಳೆಯ ವಿದ್ಯಾರ್ಥಿ ಶನಿವಾರಸಂತೆ ವಿಘ್ನೇಶ್ವರ ಪ್ರೌಡ ಶಾಲೆಯ ಶಿಕ್ಷಕ ಝಹೀರ್ ನಿಜಾಮಿ ಮುಖ್ಯ ಬಾಷಣ ಮಾಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಕೀಲ ಸಿ.ಪಿ.ಪುಟ್ಟರಾಜು, ಶಾಲೆಯ ಸಂಸ್ಥಾಪಕ ಸದಸ್ಯ ನಿವ್ರತ ತಹಶಿಲ್ದಾರ್ ಜಯರಾಂ ನೀರುಗುಂದ, ಬ್ಯಾಡಗೊಟ್ಟ ಗ್ರಾ.ಪಂ.ಅದ್ಯಕ್ಷೆ ಲೀನಾ ಪರಮೇಶ್ ,ಉಪಾಧ್ಯಕ್ಷೆ ರೇಣುಕಾ ಮೇದಪ್ಪ ,ಸದಸ್ಯರಾದ ದಿನೇಶ್ ಕುಮಾರ್,ಪಾವನ ಗಗನ್ , ಹಳೆಯ ವಿದ್ಯಾರ್ಥಿ ತೂಕ ಮತ್ತು ಆಳತೆ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು , ಮಲ್ಲಿಪಟ್ಟಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಲ್.ಕೆ.ಚಂದ್ರಕಲಾ, ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು, 

ಗುರುವಂದನೆ ಸ್ವಿಕರಿಸಿದ ಎಲ್ಲಾ ಶಿಕ್ಷಕರುಗಳು ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸಂದರ್ಭದ ನೆನಪುಗಳನ್ನು ಮೆಲುಕು ಹಾಕಿ ಹಿತನುಡಿಗಳನ್ನಾಡಿದರು. 

ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಹಳೆಯ ವಿದ್ಯಾರ್ಥಿ ಸಂಘದ ಅದ್ಯಕ್ಷ ಡಿ.ಆರ್.ವೇದ್‌ಕುಮಾರ್, ನಾವು ಕಲಿತಂತಹ ಶಾಲೆ ಐವತ್ತು ವರ್ಷ ಪೊರ‌್ಯೆಸಿದ ಹಿನ್ನೆಲೆಯಲ್ಲಿ  ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಎರಡು ದಿನ ಪೂರ್ವ ವಿದ್ಯಾರ್ಥಿಗಳ ಸಹಕಾರದಿಂದ ಹಮ್ಮಿಕೊಳ್ಳಲಾಗಿದೆ ,ಕಾರ್ಯಕ್ರಮದ ಯಶಸ್ವಿಯಾಗಿಸಲು ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಶಾಲಾಭಿವ್ರದ್ದಿ ಸಮಿತಿ ಹಾಗೂ ಶಿಕ್ಷಕ ವ್ರಂದ ಪರಿಶ್ರಮಿಸಿದ್ದಾರೆ ,ಮುಂದಿನ ದಿನಗಳಲ್ಲಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವ್ರತರಾಗುತ್ತೇವೆ ಎಂದರು. 

ಮುಖ್ಯ ಶಿಕ್ಷಕಿ ಶ್ರೀಮತಿ ಬಾಗ್ಯ ಸ್ವಾಗತಿಸಿ ,ಪ್ರಸ್ತಾವಿಕ ನುಡಿಗಳನ್ನಾಡಿದರು, ಸಹ ಶಿಕ್ಷಕಿ ರಿಜ್ವಾನ ಭಾನು ವರದಿ ವಾಚಿಸಿದರು, ಗ್ರಾ.ಪಂ.ಸದಸ್ಯ ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಉಸ್ತುವಾರಿ ಹನೀಪ್ ಎಂ.ಎಂ.ಕಾರ್ಯಕ್ರಮ ನಿರ್ವಹಿಸಿದರು, 
ಹಳೆಯ ವಿದ್ಯಾರ್ಥಿಗಳಾದ ಶ್ರಿಮತಿ ರಮ್ಯಾ ,ಇಬ್ರಾಹಿಂ ಬಾತಿಷ ನಿರೂಪಿಸಿದರು.

ವೇದಿಕೆಯಲ್ಲಿ ಅಥಿತಿಗಳಾದ ಶಾಲಾಭಿವೃದ್ಧಿ ಸಮನ್ವಯ ಸಮಿತಿ ಜಿಲ್ಲಾದ್ಯಕ್ಷ ಕೆ.ಎ‌. ನಾಗೇಶ್ , ಶಾಲಾಭಿವ್ರದ್ದಿ ಸಮಿತಿ ಅದ್ಯಕ್ಷೆ ಶ್ವೇತಾ ಧರ್ಮಪ್ಪ , ಸಿ‌ಆರ್‌ಪಿ‌ ಜಾನ್ ,ಮಸ್ಜಿದುನ್ನೂರ್ ಅದ್ಯಕ್ಷ ಡಿ.ಎ.ಸುಲ್ಯೆಮಾನ್ , ಬ್ಯಾಡಗೊಟ್ಟ ಗ್ರಾ.ಪಂ.ಅಭಿವೃದ್ಧಿ ಆದಿಕಾರಿ ಗಿರೀಶ್ ,ಸದಸ್ಯ ಮೊಕ್ಷಿಕ್ ರಾಜ್ ,ಗ್ರಾ.ಪಂ.ಮಾಜಿ ಅದ್ಯಕ್ಷ ಔರಂಗಜೇಬ್ ,ಉಸ್ಮಾನ್ ಹಾಜಿ ,ಶಾಲಾ ಸಹ ಶಿಕ್ಷಕಿ ತೇಜಾವತಿ, ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ,ಶಾಲಾಭಿವ್ರದ್ದಿ ಸಮಿತಿ ಸದಸ್ಯರುಗಳು  ಮುಂತಾದವರಿದ್ದರೂ.

ಬೆಳಿಗ್ಗೆ ಹತ್ತು ಗಂಟೆಗೆ ಆಯೋಜಿಸಿದ ಮೆರವಣಿಗೆಯನ್ನು ಶನಿವಾರಸಂತೆ ಆರಕ್ಷಕ ವ್ರತ್ತ ನಿರಿಕ್ಷಕ ಪರಶಿವಮೂರ್ತಿ ರವರು ಉದ್ಬಾಟಿಸಿದರು  ದೊಡ್ಡಕುಂದ ಜೂನಿಯರ್‌ ಕಾಲೇಜು ಸಮೀಪದ ವ್ರತ್ತದಿಂದ ಬ್ಯಾಡಗೊಟ್ಟ ಶಾಲೆಯವರೆಗೆ ಮುಖ್ಯ ರಸ್ತೆಯಲ್ಲಿ ಸಾಗಿ ಬಂತು ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ಹಳೆಯ ವಿದ್ಯಾರ್ಥಿಗಳು, ಈ ಸಾಲಿನ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರುಗಳು ಬಾಗವಹಿಸಿದರು.

ಮೊದಲ ದಿನ ಸಂಜೆ ಹಳೆ ವಿದ್ಯಾರ್ಥಿಗಳ ಮಕ್ಕಳಿಂದ ಹಾಗೂ ಸಮಾರೋಪ ಸಮಾರಂಭದ ನಂತರ ಸಂಜೆ ಶಾಲೆಯ ಈ ಸಾಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರನ್ನು ರಂಜಿಸಿತು, ಕೊಡ್ಲಿಪೇಟೆಯ ಮಾನವತಾ ಕಲಾ ತಂಡ ಜನಪದ ಗೀತೆಗಳನ್ನು ಹಾಡಿದರು.

Similar News