ಮಂಡ್ಯದಲ್ಲಿ ‘ಗೋ ಬ್ಯಾಕ್' ಅಭಿಯಾನ: ನಾನು ಬಂದಿರುವುದು ಕೆಲವರಿಗೆ ಭಯ ಹುಟ್ಟಿಸಿದೆ ಎಂದ ಸಚಿವ ಅಶೋಕ್
ಮಂಡ್ಯ: ನಾನು ಮಂಡ್ಯಕ್ಕೆ ಬಂದಿರುವುದು ಕೆಲವರಿಗೆ ಭಯ ಹುಟ್ಟಿಸಿದೆ. ಬೇರೆ ಪಕ್ಷದವರು ಎತ್ತಿ ಕಟ್ಟುತ್ತಿದ್ದಾರೆ. ನಮ್ಮ ಪಕ್ಷದವರು ಯಾರೂ ಈ ರೀತಿ ಮಾಡುವುದಿಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸುವ ಧೈರ್ಯ ನಮ್ಮ ಪಕ್ಷದಲ್ಲಿ ಯಾರಿಗೂ ಇಲ್ಲ ಎಂದು ‘ಗೋ ಬ್ಯಾಕ್ ಅಶೋಕ’ ಅಭಿಯಾನ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಉಸ್ತುವಾರಿ ಸಚಿವನಾದ ನನ್ನನ್ನು ಎರಡು ಸಾವಿರ ಬೈಕ್ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗ ಮಂಡ್ಯಕ್ಕೆ ಒಂದು ಶಕ್ತಿ ಬಂದಿದೆ. ಹಾಗಾಗಿ ಈ ರೀತಿ ಅಪಪ್ರಚಾರ ಬರುತ್ತಿದೆ. ಕಾಂಗ್ರೆಸ್ ಅಥವಾ ಜೆಡಿಎಸ್‍ನವರು ಮಾಡಿದ್ದಾರಾ ನೋಡೋಣ ಎಂದು ಅವರು ಪರೋಕ್ಷವಾಗಿ ವಿಪಕ್ಷಗಳ ಕಡೆಗೆ ಬೆಟ್ಟು ಮಾಡಿದರು.
ಇದುವರೆಗೂ ಯಾರೂ ನನ್ನ ನೇಮಕಾತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದ ಅಶೋಕ್, ನಮ್ಮ ಕಾರ್ಯಕರ್ತರನ್ನು ಜೊತೆಯಾಗಿ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಬಹಳಷ್ಟು ಬದಲಾವಣೆ ತರುತ್ತೇನೆ ಎಂದರು.
ಇದನ್ನೂ ಓದಿ: 'ಮಂಡ್ಯ ಬಿಟ್ಟು ಹೋಗಿ': ಬಿಜೆಪಿಗರಿಂದಲೇ ‘GO BACK ಆರ್.ಅಶೋಕ್’ ಅಭಿಯಾನ