ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ಕೆ.ಎಸ್.ಭರತ್‍ಕುಮಾರ್ ನೇಮಕ

Update: 2023-01-27 17:59 GMT

ಬೆಂಗಳೂರು, ಜ.27: ಜಿಲ್ಲಾ ನ್ಯಾಯಾಧೀಶರಾದ ಕೆ.ಎಸ್.ಭರತ್ ಕುಮಾರ್ ಅವರನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಹೈಕೋರ್ಟ್‍ನಲ್ಲಿ ವಿಜಿಲೆನ್ಸ್ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭರತ್ ಕುಮಾರ್ ಅವರನ್ನು ಉನ್ನತ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.

ಕೊಡಗು ಜಿಲ್ಲಾ ಮೂಲದ ಭರತ್ ಕುಮಾರ್ ಅವರು ತುಮಕೂರು ಮತ್ತು ಮೈಸೂರಿನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಇವರ ಸೇವೆಯನ್ನು ಪರಿಗಣಿಸಿ ರಿಜಿಸ್ಟ್ರಾರ್ ಜನರಲ್ ಹುದ್ದೆಗೆ ಹೈಕೋರ್ಟ್ ಆಯ್ಕೆ ಮಾಡಿದೆ.

Similar News