ಬಿಜೆಪಿ ಸರ್ಕಾರದ ಬಗ್ಗೆ ಜನರಿಗಿರುವ ಅಸಹನೆ, ಆಕ್ರೋಶಕ್ಕೆ ಖಾಲಿ ಕುರ್ಚಿಗಳೇ ಸಾಕ್ಷಿ: ಕಾಂಗ್ರೆಸ್ ಟೀಕೆ

''ಖಾಲಿ ಕುರ್ಚಿಗಳನ್ನು ರಂಜಿಸಲು 4 ಕೋಟಿ ರೂ. ಖರ್ಚು...''

Update: 2023-01-28 11:45 GMT

ಬೆಂಗಳೂರು: ಹೊಸಪೇಟೆಯಲ್ಲಿ  ಮೂರು ದಿನಗಳ 'ಹಂಪಿ ಉತ್ಸವ'ದ ಉದ್ಘಾಟನಾ ಸಮಾರಂಭ ಶುಕ್ರವಾರ ಸಂಜೆ ಜರಗಿದ್ದು, ಕಾರ್ಯಕ್ರಮದ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಂಬಧ ಟ್ವೀಟ್ ಮಾಡಿರುವ ಕಾಂಗ್ರೆಸ್, '' ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಗೂ ಖಾಲಿ ಕುರ್ಚಿಗಳು. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳಿಗೂ ಖಾಲಿ ಕುರ್ಚಿಗಳು. ಬಿಜೆಪಿ ಸರ್ಕಾರದ ಬಗ್ಗೆ ಜನತೆಗಿರುವ ಅಸಹನೆ, ಆಕ್ರೋಶಕ್ಕೆ ಖಾಲಿ ಕುರ್ಚಿಗಳು ಸಾಕ್ಷಿ ಹೇಳುತ್ತಿವೆ. ಹಂಪಿ ಉತ್ಸವದಲ್ಲಿ ಖಾಲಿ ಕುರ್ಚಿಗಳನ್ನು ರಂಜಿಸಲು 4 ಕೋಟಿ ಖರ್ಚು ಮಾಡುವ ಅಗತ್ಯವಿತ್ತೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಪ್ರಶ್ನೆ ಮಾಡಿದೆ. 

''5 ನಿಮಿಷದ ವಿಡಿಯೋಗೆ 4.5 ಕೋಟಿ'' 

"ಅನಗತ್ಯ ವೆಚ್ಚಕ್ಕೆ ಕಡಿವಾಣ" ಎಂದು ಸಿಎಂ ಕುರ್ಚಿ ಹತ್ತಿ ಕುಳಿತ ಸಿಎಂ ಬೊಮ್ಮಾಯಿ ಅವರೇ, ಹೂಡಿಕೆದಾರರ ಸಮಾವೇಶದ 5 ನಿಮಿಷದ ವಿಡಿಯೋಗೆ 4.5 ಕೋಟಿ ಪಾವತಿಸಿದ್ದು ಅಗತ್ಯವೋ, ಅನಗತ್ಯವೋ? ಸಿಎಂ ಪ್ರಕಾರ ಅನಗತ್ಯ ಖರ್ಚು ಎಂದರೆ ಬಿಸಿಯೂಟ, ಇಂದಿರಾ ಕ್ಯಾಂಟೀನ್, ಅಂಗನವಾಡಿಗಳ ಅನುದಾನ, ವಿದ್ಯಾರ್ಥಿವೇತನ, ವಸತಿ ಯೋಜನೆಗಳ ಅನುದಾನ. 40% ಕಮಿಷನ್ ಸಿಗುವಂತವು - ಅಗತ್ಯ ಖರ್ಚು!'' ಎಂದು ಇನ್ನೊಂದು ಟ್ವೀಟ್ ನಲ್ಲಿ ಕಾಂಗ್ರೆಸ್  ತರಾಟೆಗೆ ತೆಗೆದುಕೊಂಡಿದೆ. 

Similar News