ಸ್ವಾಮೀಜಿಯಿಂದ ಮೈಕ್ ಕಿತ್ತುಕೊಂಡ ಬೊಮ್ಮಾಯಿ ವರ್ತನೆ ಸರಿಯಲ್ಲ: ಎಚ್.ವಿಶ್ವನಾಥ್ ಆಕ್ಷೇಪ

Update: 2023-01-28 14:51 GMT

ಮೈಸೂರು:  ಕಾಗಿನೆಲೆ ಕನಕಗುರುಪೀಠದ ಸ್ವಾಮೀಜಿಗಳು ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಕ್ ಕಿತ್ತುಕೊಂಡು ಮಾತನಾಡಿದ ವರ್ತನೆ ಸರಿಯಲ್ಲ, ಇದೇ ಯಾವುದಾದರು ದೊಡ್ಡ ಮಠದ ಸ್ವಾಮೀಜಿಗಳಿಗೆ ಹೀಗೆ ಮಾಡಿದ್ದರೆ ಅವರು ಬಿಡುತ್ತಿದ್ದರೇ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. 

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಗಿನೆಲೆ ಕನಕಗುರು ಪೀಠದ ಸ್ವಾಮೀಜಿಗಳು  ಬೆಂಗಳೂರಿನ ಅಭಿವೃದ್ಧಿ ಕುರಿತು ಮಾತನಾಡುವ ವೇಳೆ ಮುಖ್ಯಮಂತ್ರಿಗಳು ಅದನ್ನು ಆಲಿಸಬೇಕಿತ್ತು, ಆದರೆ ಸ್ವಾಮೀಜಿಗಳ ಮೈಕ್ ಅನ್ನು ಕಿತ್ತುಕೊಂಡು ಮಾತನಾಡಿದ್ದು  ಇವರ ವರ್ತನೆ ಎಂತಹದು ಎಂದು ತೋರಿಸುತ್ತದೆ' ಎಂದು ಹೇಳಿದರು.

''ಇದೇ ಕೆಲಸವನ್ನು ದೊಡ್ಡ ದೊಡ್ಡ ಮಠಾದೀಶರಿಗೆ ಮಾಡಿದ್ದರೆ ಅವರು ಸುಮ್ಮನೆ ಬಿಡುತ್ತಿದ್ದರೇ' ಎಂದು ಕಿಡಿಕಾರಿದರು. 

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ 'ಭರವಸೆಯನ್ನಷ್ಟೇ ಕೊಟ್ಟರೆ ಒಪ್ಪುವುದಿಲ್ಲ’ ಎಂದು ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳುತ್ತಿದ್ದಂತೆ, ಅವರ ಕೈಯಿಂದ ಮೈಕ್ ಕಸಿದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: ಅನುದಾನ, ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ ಕಾಗಿನೆಲೆ ಈಶ್ವರಾನಂದ ಸ್ವಾಮೀಜಿಯಿಂದ ಮೈಕ್ ಕಸಿದುಕೊಂಡ ಬೊಮ್ಮಾಯಿ!

Full View

Similar News