ಬ್ರಾಹ್ಮಣ ಸಮುದಾಯದ ಮಾಲಕತ್ವದ ಪತ್ರಿಕೆಗಳಿಗೆ ಪ್ರೋತ್ಸಾಹ ಶ್ಲಾಘನೀಯ: ಬ್ರಾಹ್ಮಣ ಮಹಾಸಭಾ

Update: 2023-01-28 17:51 GMT

ಬೆಂಗಳೂರು, ಜ.28: ಪರಿಶಿಷ್ಠ ಜಾತಿ ಮತ್ತು ಹಿಂದುಳಿದ ವರ್ಗಗಳ ಮಾಲಕತ್ವದ ಪತ್ರಿಕೆಗಳಿಗೆ ಕೆಲವು ವರ್ಷಗಳಿಂದ ನೀಡುತ್ತಿರುವ ಪ್ರೋತ್ಸಾಹ, ಜಾಹೀರಾತು ಬೆಂಬಲವನ್ನು ಬ್ರಾಹ್ಮಣ ಸಮುದಾಯದ ಮಾಲಕತ್ವದ ಪತ್ರಿಕೆಗಳಿಗೂ ವಿಸ್ತರಿಸುವಂತೆ ಆದೇಶ ಹೊರಡಿಸಿದ ರಾಜ್ಯ ಸರಕಾರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ ಈ ಕುರಿತು ಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಪ್ರಕಟನೆ ಹೊಡಿಸಿದ್ದು, ರಾಜ್ಯ ಸರಕಾರವು ನೀಡುತ್ತಿದ್ದ ಕೆಲವು ಸವಲತ್ತುಗಳಿಂದ ಬ್ರಾಹ್ಮಣ ಸಮುದಾಯದ ಮಾಲಕತ್ವದ ಕೇವಲ 18ರಿಂದ 25ರಷ್ಟು ಪತ್ರಿಕೆಗಳು ವಂಚಿತವಾಗಿದ್ದವು. ಯಾವುದೇ ಸಮುದಾಯದ ಮಾಲಕತ್ವದ ಪತ್ರಿಕೆಗಳಿಗೆ ಮುದ್ರಣ ಕಾಗದ ದರ, ಮುದ್ರಣ ವೆಚ್ಚ, ಸರಬರಾಜು, ನೌಕರರ ಭತ್ಯೆ ವೆಚ್ಚಗಳು ಒಂದೇ ಆಗಿರುವುದರಿಂದ ಬ್ರಾಹ್ಮಣ ಮಾಲಕತ್ವದ ಪತ್ರಿಕೆಗಳಿಗೂ ಈ ಸವಲತ್ತು ವಿಸ್ತರಣೆಗಾಯಗಬೇಕು ಎಂದು ಮಹಾಸಭಾ ಹಲವು ಬಾರಿ ಮನವಿ ಮಾಡಿತ್ತು. ನಮ್ಮ ಈ ಮನವಿಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿರುವ ರಾಜ್ಯ ಸರಕಾರವು ಇದೀಗ ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೂ ಪ್ರೋತ್ಸಾಹಕ ಜಾಹೀರಾತು ನೀಡಲು ಅನುಮತಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.

Similar News