ಚಿಕ್ಕಮಗಳೂರು: 1 ಲಕ್ಷ ರೂ. ಮೌಲ್ಯದ MDMA ಡ್ರಗ್ಸ್ ಸಹಿತ ಆರೋಪಿಯ ಸೆರೆ

Update: 2023-01-29 09:41 GMT

ಚಿಕ್ಕಮಗಳೂರು, ಜ.29: ನಿಷೇಧಿತ ಮಾದಕ ವಸ್ತು MDMA ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಚಿಕ್ಕಮಗಳೂರು ನಗರ ಸಿ.ಇ.ಎನ್. ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಜರ್ತಾಬ್ ಬಂಧಿತ ಆರೋಪಿ. ಈತನಿಂದ 1 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 12 ಗ್ರಾಂ MDMA ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ನಗರದ ಪವಿತ್ರ ವನ ಬಳಿ ಕಾರಿನಲ್ಲಿ ಮಾದಕ ವಸ್ತು ಇಟ್ಟುಕೊಂಡು ಸಾರ್ವಜನಿಕ ಪ್ರದೇಶದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪೊಲೀಸ್ ಬಲೆಗೆ ಬಿದ್ದಿರುವುದಾಗಿ ತಿಳಿದುಬಂದಿದೆ. ಜೊತೆಗಿದ್ದ ಇನ್ನೋರ್ವ ಆರೋಪಿಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಿ.ಇ.ಎನ್. ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Similar News