ಹಾಲಿನ ಪೌಡರ್ ಅಕ್ರಮ ಸಾಗಾಟ, ಖರೀದಿ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸಹಿತ ಮೂವರಿಗೆ ಶಿಕ್ಷೆ, ದಂಡ

Update: 2023-01-30 04:12 GMT

ಕಲಬುರಗಿ: ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ಹಾಲಿನ ಪೌಡರ್ ಅಕ್ರಮ ಸಾಗಾಟ ಮತ್ತು ಖರೀದಿ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸಹಿತ ಸಹಿತ ಮೂವರು ಆರೋಪಿಗಳಿಗೆ ಯಾದಗಿರಿ ಜಿಲ್ಲಾ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್, ಬಾಬುಗೌಡ ಪಾಟೀಲ್, ರಾಜೂಗೌಡ ಶಿಕ್ಷೆಗೊಳಗಾದ ಆರೋಪಿಗಳು.

ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ನಂದಿನಿ ಹಾಲಿನ ಪೌಡರ್ 500 ಗ್ರಾಂ.ನ ಒಟ್ಟು 340 ಪ್ಯಾಕೆಟ್ ಗಳನ್ನು ಅಕ್ರಮ ಸಾಗಾಟದ ಆರೋಪದಡಿ 2015ರಲ್ಲಿ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷಿಸಮೇತ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ತನಿಖೆಯಲ್ಲಿ ಆರೋಪ ಸಾಬಿತಾಗಿದ್ದು, ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಬಾಬುಗೌಡ ಪಾಟೀಲ್, ರಾಜೂಗೌಡ ಸೇರಿದಂತೆ ಮೂವರಿಗೆ ತಲಾ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ ದಂಡ ವಿಧಿಸಿ ಯಾದಗಿರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಹೊನ್ನಾಳಿ ತೀರ್ಪು ಪ್ರಕಟಿಸಿದ್ದಾರೆ.

ಬಿಜೆಪಿಯ ಪ್ರಭಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಮಣಿಕಂಠ ರಾಥೋಡ್, ಚಿತ್ತಾಪೂರ ಹಾಲಿ ಶಾಸಕ ಪ್ರೀಯಾಂಕ ಖರ್ಗೆ ವಿರುದ್ಧ ಸ್ಪರ್ಧೆ ಮಾಡಲು ಕ್ಷೇತ್ರದಲ್ಲಿ ತಯಾರಿ ನಡೆಸುತ್ತಿದ್ದರು.

Similar News