ಶಿಕ್ಷಕರ ವರ್ಗಾವಣೆ, ಮುಂಬಡ್ತಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯ; ಶಿಕ್ಷಣ ಸಚಿವರಿಗೆ ಪತ್ರ

Update: 2023-01-30 15:25 GMT

ಬೆಂಗಳೂರು, ಜ.30: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ, ಮುಂಬಡ್ತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು. ಸರಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆಳಿಗೆ ವಿನಾಯಿತಿಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ. 

ಪ್ರಾಥಾಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಎಲ್ಲ ವಿಷಯಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗಳನ್ನು ಯಾವುದೇ ಶಿಕ್ಷಕರಾಗಿರಲೀ ಆಯಾ ತಾಲೂಕಿನ ಒಳಗಡೆ ಸ್ಥಳ ನಿಯುಕ್ತಿ ಮಾಡಬೇಕು. ಶಿಕ್ಷಕರು ಇಚ್ಚಿಸಿದ್ದಲ್ಲಿ ಮಾತ್ರ ಬೇರೆ ತಾಲೂಕು ಅಥವಾ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ತಿಳಿಸಿದ್ದಾರೆ. 

ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ವರ್ಷದಿಂದ ಮುಂಬಡ್ತಿಯನ್ನು ನೀಡಿಲ್ಲ. ಈಗಾಗಲೇ ಸಾವಿರಾರು ಶಿಕ್ಷಕರು ಮುಂಬಡ್ತಿ ಪಡೆಯದೆ ನಿವೃತ್ತಿ ಆಗುತ್ತಿದ್ದಾರೆ. ಹಾಗಾಘಿ ಸಂಬಂಧಪಟ್ಟವರಿಗೆ ಮುಂಬಡ್ತಿ ನೀಡಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

Similar News