ಎಸ್ಸಿ, ಎಸ್ಟಿ ಮಾಲಕತ್ವದ ಪತ್ರಿಕೆಗಳಿಗೆ ಹೆಚ್ಚುವರಿ ಜಾಹೀರಾತು: ರಾಜ್ಯ ಸರಕಾರ ಆದೇಶ

Update: 2023-01-30 16:30 GMT

ಬೆಂಗಳೂರು, ಜ.30: ಮಾಧ್ಯಮ ಪಟ್ಟಿಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ಮಾಲಕತ್ವ, ಸಂಪಾದಕತ್ವ್ವದಲ್ಲಿ ಪ್ರಕಟವಾಗುವ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟದ ಪ್ರೋತ್ಸಾಹ ರೂಪದ ಜಾಹಿರಾತು ಹಾಗೂ ಹೆಚ್ಚುವರಿ ಅರ್ಧಪುಟ ಜಾಹೀರಾತನ್ನು ಬಿಡುಗಡೆ ಮಾಡುವಂತೆ ಸರಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸಬೇಕು ಎಂದು ತಿಳಿಸಲಾಗಿದೆ. 

Similar News