ಗೋಡ್ಸೆಯಲ್ಲಿನ ವೈರಸ್‌ ಬಿಜೆಪಿಗರಲ್ಲೂ ಇದೆ: ಸುಧೀರ್‌ ಕುಮಾರ್‌ ಮುರೊಳ್ಳಿ

''ಪ್ರಧಾನಿ ಮೋದಿಯವರ 56 ಇಂಚಿನ ಎದೆಯಲ್ಲಿ ಪ್ರೀತಿಯಿಲ್ಲ''

Update: 2023-01-30 17:02 GMT

ಶಿವಮೊಗ್ಗ: ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ದ್ವೇಷ ರಾಜಕಾರಣ ವಿರುದ್ಧದ, ಸಂವಿಧಾನದ ಆಶಯ ಉಳಿವಿನ ಮತ್ತು ಎರಡು ಕೋಮುಗಳನ್ನು ಒಗ್ಗೂಡಿಸುವ ಯಾತ್ರೆಯಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ ಹೇಳಿದ್ದಾರೆ. 

ರಾಹುಲ್‌ ಗಾಂಧಿ ಅವರ ‘ಭಾರತ್‌ ಐಕ್ಯತಾ ಯಾತ್ರೆ’ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿಯಿಂದ ನಗರದ ಗೋಪಿ ವೃತ್ತದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಮೆರವಣಿಗೆ, ದೃಶ್ಯ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಗೋಡ್ಸೆಯಲ್ಲಿನ ವೈರಸ್‌ ಬಿಜೆಪಿಗರಲ್ಲೂ ಇದೆ ದೇಶ ವಿಭಜನೆಗಾಗಿ ಗಾಂಧೀಜಿ ಕೊಲೆ ಮಾಡಲಾಗಿದೆ ಎಂಬುವುದು ಆರೆಸ್ಸೆಸ್ ವಾದ. ವಾಸ್ತವದಲ್ಲಿಗಾಂಧೀಜಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ. ಆತನಲ್ಲಿದ್ದ ಕೆಟ್ಟ ವಿಚಾರ ಧಾರೆ ಎಂಬ  ವೈರಸ್‌. ಇದೇ ವೈರಸ್‌ ಈಗಿನ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ನಾಯಕರಲ್ಲಿದೆ ಎಂದರು.

ಬಿಜೆಪಿ ತೆರಿಗೆ ಭಯೋತ್ಪಾದನೆಯ ಮೂಲಕ ಜನರನ್ನು ಆತಂಕಕ್ಕೀಡು ಮಾಡಿದೆ. ಬ್ರಿಟಿಷರು ತಿನ್ನುವ ಉಪ್ಪಿಗೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹ ಮಾಡಿದ್ದರು. ಅದೇ ವಂಶದ ಕುಡಿಯಾದ ರಾಹುಲ್‌ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆಯನ್ನು ಮಾಡಿದ್ದಾರೆ. ಈ ಮೂಲಕ ಜನಪರವಾದ ನಿಲುವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆಭಾರಿ ಜನಸ್ಪಂದನೆ ಸಿಕ್ಕಿದೆ ಎಂದರು.

ಪಪ್ಪು’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಅವರನ್ನು ಕರೆಯಬೇಕೇ ವಿನಹ ರಾಹುಲ್‌ ಗಾಂಧಿ ಅವರನ್ನಲ್ಲ. ಈಶ್ವರಪ್ಪ ಅವರ ಪ್ರಚೋದನೆಯಿಂದಾಗಿ ಶಿವಮೊಗ್ಗ ನಗರದಲ್ಲಿ60ಕ್ಕೂ ಹೆಚ್ಚು ದಿನಗಳ ಕಾಲ 144 ಸೆಕ್ಷನ್‌ ವಿಧಿಸಲಾಗಿತ್ತು. ಇದು ಶಿವಮೊಗ್ಗಕ್ಕೆ ಈಶ್ವರಪ್ಪ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಎನ್‌.ರಮೇಶ್‌, ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ನಿಖಿತ್‌ರಾಜ್‌ ಮೌರ್ಯ, ಎಸ್‌.ಪಿ. ದಿನೇಶ್‌, ಕಲಗೋಡು ರತ್ನಾಕರ್‌, ಪಿ.ಒ.ಶಿವಕುಮಾರ್‌ ಇತರರಿದ್ದರು.

56 ಇಂಚಿನ ಎದೆಯಲ್ಲಿ ಪ್ರೀತಿಯಿಲ್ಲ: ಪ್ರಧಾನಿ ನರೇಂದ್ರ ಅವರ 56 ಇಂಚಿನ ಎದೆಯಲ್ಲಿಜನರ ಬಗ್ಗೆ ಪ್ರೀತಿ ಇಲ್ಲ. ಹಾಗೂ ಜನರನ್ನು ಎದುರಿಸುವ ಧೈರ್ಯ ಮತ್ತು ನೈತಿಕತೆಯೂ ಇಲ್ಲಎಂದು ಟೀಕಿಸಿದರು.

ದಲಿತರ ಮೇಲೆ ಭಯ ಇರುವುದರಿಂದ ನಾಟಕಕ್ಕಾಗಿ ಬಿಜೆಪಿಯವರು ಅಂಬೇಡ್ಕರ್‌ ಅವರನ್ನು ಗೌರವಿಸುತ್ತಾರೆಯೇ ವಿನಹ ವಾಸ್ತವದಲ್ಲಿಅವರಿಗೆ ಸಂವಿಧಾನ ಮತ್ತು ಅಂಬೇಡ್ಕರ್‌ ಮೇಲೆ ಪ್ರೀತಿ ಇಲ್ಲ. ಬಿಜೆಪಿ ಜಾತ್ಯತೀತರನ್ನು ಅವಹೇಳನ ಮಾಡುತ್ತದೆ ಎಂದು ಆಪಾದಿಸಿದರು.

Similar News