ಕುಮಟಾ | ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಗುಜರಿ ಅಂಗಡಿ

Update: 2023-01-31 06:36 GMT

ಕುಮಟಾ: ಆಕಸ್ಮಿಕವಾಗಿ ಬೆಂಕಿ ತಗಲಿ ಗುಜರಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಕುಮಟಾ ಪಟ್ಟಣದ ಅಳ್ವೇಕೊಡಿಯ ಎಂಬಲ್ಲಿ ಸೋಮವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಅಳ್ವೇಕೊಡಿಯ ಬಾಷಾ ಶೇಕ್ ಎಂಬರಿಗೆ ಸೇರಿದ ಗುಜರಿ ಅಂಗಡಿಗೆ ಬೆಂಕಿ ತಗಲಿದೆ. ಗುಜರಿ ಅಂಗಡಿಯಲ್ಲಿದ್ದ ಕಚ್ಚಾವಸ್ತುಗಳು ಬೆಂಕಿಗಾಹುತಿಯಾಗಿದ್ದು, ನಷ್ಟ ಸಂಭವಿಸಿದೆ. ಕುಮಟಾ, ಹೊನ್ನಾವರ ಅಂಕೊಲಾ, ಭಟ್ಕಳ, ಕಾರವಾರದ ಅಗ್ನಿಶಾಮಕದಳದವರು ಸತತವಾಗಿ 6 ಗಂಟೆಗಳ ಕಾಲ ಬೆಂಕಿ ನಂದಿಸಲು ಹರಸಾಹಸಪಟ್ಟರು. ಘಟನೆ ಸುತ್ತಮುತ್ತಲ ಸ್ಥಳೀಯ ಮನೆಯವರಿಗೆ ಆತಂಕವನ್ನು ಉಂಟು ಮಾಡಿದ್ದು, ಸ್ಥಳೀಯವಾಗಿದ್ದ ಕೆಲ ಮನೆಗಳೆಲ್ಲಾ ಖಾಲಿ ಮಾಡಲಾಗಿತ್ತು.

Similar News