ನಕಲಿ CBSE ಸರ್ಟಿಫಿಕೇಟ್ ಆರೋಪ: ರುಪ್ಸಾ ಸಂಘಟನೆ ಅಧ್ಯಕ್ಷ ವಶಕ್ಕೆ

Update: 2023-02-01 07:12 GMT

ಚಿತ್ರದುರ್ಗ: CBSE ಸರ್ಟಿಫಿಕೇಟ್ ನಕಲಿ ಮಾಡಿ ಶಾಲೆ ನಡೆಸುತ್ತಿದ್ದ ಆರೋಪದಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರನ್ನು ಚಿತ್ರದುರ್ಗ ಪೊಲೀಸರು ಬುಧವಾರ ವಶಕ್ಕೆ ಪಡೆದಿರುವುದು ವರದಿಯಾಗಿದೆ.  

ಅಲ್ಲದೇ, ಲೋಕೇಶ್ ಅವರು ಶಾಲಾ ಸಂಘಟನೆ ಹೆಸರಿನಲ್ಲಿ ಅಕ್ರಮ ನಡೆಸಿರುವ ಹಾಗೂ ಸಂಘಟನೆ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಕುರಿತು ಪ್ರತಿಕ್ರಿಯಿಸಿರವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, 'ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ಅವರು CBSE ನಕಲಿ ಸರ್ಟಿಫಿಕೇಟ್ ಮಾಡಿ ಸಾಂದೀಪನಿ ಎಂಬ ಶಾಲೆ ನಡೆಸುತ್ತಿದ್ದಾರೆ. CBSE ಪ್ರಮಾಣ ಪತ್ರ ಸರಿಯಿಲ್ಲ ಎಂಬ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ‌'ಎಂದು ತಿಳಿಸಿದರು. 

Similar News