ಕೆಸಿ ವ್ಯಾಲಿ ಯೋಜನೆ ಜಾಗತಿಕ ನಾಯಕರ ಗಮನ ಸೆಳೆದಿದೆ, ನನಗಿದು ಪ್ರಶಸ್ತಿಗಿಂತಲೂ ದೊಡ್ಡದು: ಸಿದ್ದರಾಮಯ್ಯ

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರ ವಿಡಿಯೋ ಹಂಚಿಕೊಂಡ ವಿಪಕ್ಷ ನಾಯಕ

Update: 2023-02-01 12:58 GMT

ಬೆಂಗಳೂರು, ಫೆ.1: ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ಕೆಸಿ ವ್ಯಾಲಿ ಯೋಜನೆ ತ್ಯಾಜ್ಯನೀರಿನ ಮರುಬಳಕೆಯಲ್ಲಷ್ಟೇ ಇತಿಹಾಸ ಸೃಷ್ಟಿಸಿರುವುದಲ್ಲ, ರೈತರ ಬದುಕಲ್ಲಿ ಬದಲಾವಣೆ ಮೂಡಿಸಿ ಜಾಗತಿಕ ನಾಯಕರ ಗಮನ ಸೆಳೆದಿದೆ ಎಂಬುದಕ್ಕೆ ಯು.ಎನ್.ಜನರಲ್ ಅಂಸೆಬ್ಲಿ ಅಧ್ಯಕ್ಷರ ಮಾತುಗಳು ಸಾಕ್ಷಿ. ಮುಖ್ಯಮಂತ್ರಿಯಾಗಿ ಯೋಜನೆ ಜಾರಿಮಾಡಿದ ನನಗಿದು ಪ್ರಶಸ್ತಿ, ಸನ್ಮಾನಗಳಿಗಿಂತಲೂ ದೊಡ್ಡದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೆ.ಸಿ.ವ್ಯಾಲಿ ತ್ಯಾಜ್ಯ ನೀರಿನ ನಿರ್ವಹಣಾ ಯೋಜನೆಯಿಂದಾಗಿ, ನಾಲ್ಕು ವರ್ಷಗಳ ಹಿಂದೆ ಒಣ ಭೂಮಿಯಾಗಿದ್ದ ಈ ಭಾಗದಲ್ಲಿ ಇಂದು ನಾನು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸಿ ಬೆಳೆದಿರುವ ತೆಂಗಿನ ನೀರನ್ನು ಆನಂದಿಸುತ್ತಿದ್ದೇನೆ. ಈ ಯಶಸ್ಸಿನ ಹಿಂದಿನ ಎಲ್ಲರಿಗೂ ಅಭಿನಂದನೆಗಳು ಎಂದು ಯು.ಎನ್.ಜನರಲ್ ಅಸೆಂಬ್ಲಿ ಅಧ್ಯಕ್ಷ (UN General Assembly President) ಸಬಾ ಕರೋಸಿ ಮಾತನಾಡಿರುವ ವಿಡಿಯೋವನ್ನು ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

Similar News