ರಾಜ್ಯದ 111 ಗ್ರಾಮ ಪಂಚಾಯತ್ ಗಳ 262 ಸದಸ್ಯರ ಸ್ಥಾನಗಳಿಗೆ ಫೆ.25ಕ್ಕೆ ಚುನಾವಣೆ

ಫೆ.8ರಿಂದ ಚುನಾವಣೆಗೆ ಅಧಿಸೂಚನೆ

Update: 2023-02-01 14:58 GMT

ಬೆಂಗಳೂರು, ಫೆ.1: ವಿವಿಧ ಕಾರಣಗಳಿಂದ ತೆರವಾಗಿರುವ ಹಾಗೂ ಅವಧಿ ಮುಕ್ತಾವಾಗಿರುವ ರಾಜ್ಯದ 111 ಗ್ರಾಮ ಪಂಚಾಯಿತಿಗಳ 262 ಸದಸ್ಯರ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗವೂ ಫೆ.25ರಂದು ಚುನಾವಣೆ ನಡೆಸಲಿದೆ.

ಅವಧಿ ಮುಕ್ತಾಯವಾಗಿರುವ 8 ಗ್ರಾಮ ಪಂಚಾಯಿತಿಗಳಲ್ಲಿ 127 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಳಿಂದ ತೆರವಾಗಿರುವ 103 ಗ್ರಾಮ ಪಂಚಾಯಿತಿಗಳ 135 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದ್ದು, ಫೆ.8ರಿಂದ ಆಯಾ ಜಿಲ್ಲೆಯ ಜಿಲ್ಲಾಡಳಿತ ಚುನಾವಣೆಯ ಅಧಿಸೂಚನೆ ಹೊರಡಿಸಲಿದೆ.

ಫೆ.14ರಂದು ನಾಮಪತ್ರ ಸಲ್ಲಿಸಲು ಕೊನೆಯದಿನವಾಗಿದ್ದು, ಫೆ.15ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಜರುಗಲಿದೆ.ಆನಂತರ, ಉಮೇದಾರಿಕೆ ಹಿಂತೆಗೆದುಕೊಳ್ಳಲು ಫೆ.17ರಂದುಅವಕಾಶ ಕಲ್ಪಿಸಲಾಗಿದೆ. ಬಳಿಕ ಫೆ.25ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಫೆ.28ರಂದು ಫಲಿತಾಂಶ ಹೊರಬಿಳಲಿದೆ.

ಪ್ರಮುಖವಾಗಿ ಚುನಾವಣಾ ನೀತಿ ಸಂಹಿತೆಯು ಫೆ.8ರಿಂದ 28ರವರೆಗೂ ಜಾರಿಯಲ್ಲಿ ಇರಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಸುಮಲತಾಗೆ ಅಭಿಮಾನಿಗಳೇ ಹೈಕಮಾಂಡ್?; ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ

Similar News