ಮೋದಿಯಿಂದ ದೇಶಕ್ಕೆ ಗೌರವ, ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ದೇವರೇ ಕಾಪಾಡಬೇಕಿತ್ತು: ಸಿ.ಟಿ.ರವಿ

Update: 2023-02-01 16:29 GMT

ಚಿಕ್ಕಮಗಳೂರು, ಜ.1: 'ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ನೂರು, ಮುನ್ನೂರು ವರ್ಷಗಳಲ್ಲಿ ಜಗತ್ತು ಹೇಗೆ ಇರುತ್ತದೆ ಎಂಬದುನ್ನು ಯೋಚನೆ ಮಾಡಿ ದೇಶದ ಅಭಿವೃದ್ಧಿಗಾಗಿ ದೂರದೃಷ್ಟಿಯ ಬಜೆಟ್ ಕೊಟ್ಟಿದ್ದಾರೆ' ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನಾದ್ಯಂತ ಭಾರತ ಗೌರವ ಸಂಪಾದಿಸುವ ಸ್ಥಿತಿಗೆ ಬಂದಿರುವುದು ಮೋದಿ ಅವರಂತಹ ಒಬ್ಬ ಪ್ರಧಾನಿ ಅಧಿಕಾರ ನಡೆಸುತ್ತಿರುವುದರಿಂದಾಗಿ. ಕೇಜ್ರಿವಾಲ್ ಅಂತವರು ಅಧಿಕಾರದಲ್ಲಿದ್ದಿದ್ದರೆ ಶ್ರೀಲಂಕಾ, ಪಾಕಿಸ್ಥಾನದ ಸ್ಥಿತಿಗೆ ಭಾರತ ಬರುತ್ತಿತ್ತು. ರಾಹುಲ್ ಗಾಂಧಿ ತರಹದವರು ದೇಶ ಆಳುತ್ತಿದ್ದರೇ ದೇಶವನ್ನು ದೇವರೇ ಕಾಪಾಡಬೇಕಾಗಿತ್ತು ಎಂದು ಟೀಕಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿರುವ ಬಜೆಟ್‍ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ದೇಶದ ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ ನೀಡಿದ್ದಾರೆ. ಯುವ ಸಮುದಾಯ, ಮೂಲಸೌಕರ್ಯಕ್ಕೆ ಒತ್ತು ನೀಡಿದ್ದು, ಇದುಪರಿಸರ ಸ್ನೇಹಿ ಬಜೆಟ್ ಆಗಿದೆ ಎಂದ ಅವರು, ಆದಾಯ ತೆರಿಗೆ ರಿಯಾಯಿತಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿರುವುದು ದೂರದೃಷ್ಟಿ ಯೋಚನೆಯಾಗಿದೆ. ದೇಶದ ಹಿತದೃಷ್ಟಿಯುಳ್ಳ ಬಜೆಟ್ ಇದಾಗಿದ್ದು, ಬಡವರ ಸ್ನೇಹಿ ಆಗಿರುವ ಬಜೆಟ್ ಆಗೊಇದೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವ ಕಳೆದ 9 ಬಜೆಟ್‍ಗಳಂತೆ ಈ ಬಾರಿಯ ಬಜೆಟ್ ಕೂಡ ದೂರದೃಷ್ಟಿ, ದೇಶದ ಹಿತಕಾಯುವ ನಿಟ್ಟಿನಲ್ಲಿರುವ ಬಜೆಟ್ ಆಗಿದೆ. ಈ ಬಜೆಟ್ ಬಡವರಿಗೆ ಬಲ ನೀಡಲಿದೆ. ಇಂತಹ ಬಜೆಟ್ ಮಂಡಿಸಿರುವ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Similar News