ನಂದಿಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ನಿರ್ಮಾಣ: ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮುಂದುವರಿಸಿದ ಹೈಕೋರ್ಟ್

ಟಿವಿ ಚಾನೆಲ್‍ಗಳಲ್ಲಿನ ಚರ್ಚೆಯ ಗುಣಮಟ್ಟ ಪರಿಗಣಿಸುವುದಿಲ್ಲ ಎಂದ ನ್ಯಾಯಾಲಯ

Update: 2023-02-02 16:27 GMT

ಬೆಂಗಳೂರು, ಫೆ. 2: ಟಿವಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಗುಣಮಟ್ಟವನ್ನು ನಾವು ಪರಿಗಣಿಸುವುದಿಲ್ಲ. ಆದರೆ, ಈ ವಿಚಾರದಲ್ಲಿ ಪ್ರತ್ಯೇಕವಾಗಿ ಮಾಧ್ಯಮಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಬಹುದು ಎಂದು ಹೈಕೋರ್ಟ್ ಅರ್ಜಿದಾರರನ್ನು ಕುರಿತು ಮೌಖಿಕವಾಗಿ ಹೇಳಿತು.

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ ಪ್ರಶ್ನಿಸಿರುವ ಕೇಸ್‍ನಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್‍ರನ್ನು ಟಿವಿ ಚಾನೆಲ್‍ಗಳು ‘ಅಶಾಂತಿ ಭೂಷಣ್ʼ ಎಂದು ಹೇಳಿವೆ ಎಂದು ಪೀಠಕ್ಕೆ ತಿಳಿಸಿದಾಗ ನ್ಯಾಯಾಲಯವು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಬಹುದು ಎಂದು ಹೇಳಿತು.

ಇಶಾ ಯೋಗ ಕೇಂದ್ರದ ಪರ ವಾದಿಸಿದ ವಕೀಲರು, ಆದಿಯೋಗಿ ಪ್ರತಿಮೆ ಪ್ರತಿಷ್ಠಾನದ ಕಾಮಗಾರಿಗೆ ನೀಡಿರುವ ಯಥಾಸ್ಥಿತಿ ಆದೇಶವು ಪೂರ್ವಗ್ರಹ ಪೀಡಿತವಾಗಿದೆ. ಆದ್ಯತೆಯ ಮೇರೆಗೆ ಪ್ರಕರಣ ಆಲಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ನಾವು ಪೂರ್ವಗ್ರಹ ಉಂಟು ಮಾಡುವ ಯಾವುದೇ ಆದೇಶ ಮಾಡಿಲ್ಲ. ಅರ್ಹತೆಯ ವಿಚಾರದ ಕುರಿತು ಎಲ್ಲರ ವಾದ ಆಲಿಸಲಾಗುವುದು ಎಂದು ಹೇಳಿ,  ಯಥಾಸ್ಥಿತಿ ಮುಂದುವರಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

Similar News