×
Ad

ಆರೋಪಿ ಮೃತಪಟ್ಟಿದ್ದರೂ ದಂಡ ವಸೂಲು ಮಾಡಬಹುದು: ಹೈಕೋರ್ಟ್

Update: 2023-02-02 22:50 IST

ಬೆಂಗಳೂರು, ಫೆ.2: ಅಪರಾಧಿ ಸಾವನ್ನಪ್ಪಿದ್ದರೂ ಆತನಿಗೆ ವಿಧಿಸಿದ ದಂಡವನ್ನು ಅವರ ಆಸ್ತಿ ಅಥವಾ ಉತ್ತರಾಧಿಕಾರಿಯಿಂದ ವಸೂಲು ಮಾಡಬಹುದು ಎಂದು ಹೈಕೋರ್ಟ್ ಆದೇಶಿಸಿದೆ.

ಹಾಸನದ ತೊಟ್ಲೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

ಮೇಲ್ಮನವಿದಾರರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಆದರೆ, ಮೃತ ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಎಂದು ಆದೇಶಿಸಿದೆ. 

Similar News