‘ಸಚಿವರ ನಡೆ ಹಾಸ್ಟೆಲ್ ಕಡೆ’; ಯಾದಗಿರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಸ್ಟೆಲ್ ವಾಸ್ತವ್ಯ

Update: 2023-02-03 17:29 GMT

ಬೆಂಗಳೂರು, ಫೆ. 3: ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ವಡಗೇರಾ ಗ್ರಾಮದಲ್ಲಿ ಫೆ.6 ಹಾಗೂ 7ರಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಸ್ಟೆಲ್ ವಾಸ್ಯವ್ಯ ಮಾಡಲಿದ್ದಾರೆ.

ಫೆ.6ರಂದು ವಡಗೇರಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಾಸ್ತವ್ಯ ಮಾಡಲಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಎಸ್‍ಪಿಎಸ್‍ಪಿ/ಟಿಎಸ್‍ಪಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ವಿವಿಧ ಅಭಿವೃದ್ಧಿ ನಿಗಮಗಳು, ಕ್ರೈಸ್ ವಸತಿ ಶಾಲೆಗಳಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿ, ಯೋಜನೆಗಳ ಅನುಷ್ಟಾನದ ಬಗ್ಗೆ ಪ್ರಗತಿ ಪರಿಶೀಲಿಸಲಿದ್ದಾರೆ.

ಸಂಜೆ ವಸತಿ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ವಸತಿ ಶಾಲೆಯಲ್ಲಿಯೆ ವಾಸ್ತವ್ಯ ಮಾಡಲಿದ್ದಾರೆ. ಮರುದಿನ ಬೆಳಗ್ಗೆ ವಿದ್ಯಾರ್ಥಿಗಳ ಯೋಗ ಮತ್ತು ಕರಾಟೆ ಸ್ವಯಂರಕ್ಷಣಾ ಕಲೆ ಪ್ರದರ್ಶನವನ್ನು ವೀಕ್ಷಿಸಿ, ಹುಣಸಗಿ ತಾಲ್ಲೂಕಿನ, ಮುದಲೂರು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲ ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News