'ಮೇಕ್ ಇನ್ ಇಂಡಿಯಾ' ಲೋಗೋ ಕಾಮಗಾರಿ ಕಳಪೆ: ಚಿಕ್ಕಮಗಳೂರು ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ

Update: 2023-02-04 04:54 GMT

ಚಿಕ್ಕಮಗಳೂರು, ಫೆ.4: ನಗರದ ಹೃದಯ ಭಾಗದಲ್ಲಿರುವ ಆಝಾದ್ ಪಾರ್ಕ್ ವೃತ್ತದಲ್ಲಿ ನಗರಸಭೆ ಅನುದಾನದಲ್ಲಿ ಮೇಕ್ ಇಂಡಿಯಾ ಪರಿಕಲ್ಪನೆಯ ಲೋಗೋದ ಪ್ರತಿಮೆ ನಿರ್ಮಿಸಿ ಒಂದು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಲೋಗೋದ ಮುಂಭಾಗದಲ್ಲಿ ಗುಂಡಿಬೀಳುವ ಮೂಲಕ ಕಳಪೆ ಕಾಮಗಾರಿ ನಡೆಸಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಜ.18ರಿಂದ 22ರವರೆಗೆ ಅದ್ದೂರಿಯಾದ ಜಿಲ್ಲಾ ಉತ್ಸವ ನಡೆದಿದ್ದು ಉತ್ಸವಕ್ಕೂ ಮುನ್ನ ಆಝಾದ್ ಪಾರ್ಕ್ ವೃತ್ತದಲ್ಲಿ ನಗರಸಭೆ ಅನುದಾನದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಲೋಗೋ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.

ಜಿಲ್ಲಾ ಉತ್ಸವದೊಳಗೆ ಲೋಗೋ ಪ್ರತಿಮೆ ನಿರ್ಮಾಣ ಆಗಬೇಕೆಂಬ ನಗರಸಭೆ ಅಧ್ಯಕ್ಷರ ಷರತ್ತಿನೊಂದಿಗೆ ನಡೆದ ಈ ಕಾಮಗಾರಿಯನ್ನು ನಡೆಸಲಾಗಿದ್ದು, ಕೇವಲ 15 ದಿನಗಳಲ್ಲಿ ಪ್ರತಿಮೆಯನ್ನು ನಿರ್ಮಿ ಸಲಾಗಿತ್ತು. ಆದರೆ, ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಿದ್ದರಿಂದ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪ ಕೇಳಿ ಬಂದಿದೆ.

Similar News