7ನೆ ರಾಜ್ಯ ವೇತನ ಆಯೋಗ ರಚನೆ; ಸಲಹೆಗಳಿಗಾಗಿ ಫೆ.10ರ ವರೆಗೆ ಸಮಯಾವಕಾಶ ನೀಡಿದ ಆಯೋಗ

Update: 2023-02-04 17:57 GMT

ಬೆಂಗಳೂರು, ಫೆ.4: ಸರಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ವರದಿ ನೀಡಲು ರಾಜ್ಯ ಸರಕಾರ 7ನೆ ರಾಜ್ಯ ವೇತನ ಆಯೋಗವನ್ನು ರಚಿಸಿದೆ. 

ಸರಕಾರವು ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳಿಗೆ ಸಾರ್ವಜನಿಕರು ಸೇವಾ ಸಂಘಗಳು ಹಾಗೂ ಸರಕಾರಿ ನೌಕರರು, ಸಂಘ ಸಂಸ್ಥೆ ಇಲಾಖೆಗಳಿಂದ ಮಾಹಿತಿ, ಅನಿಸಿಕೆ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಪ್ರಶ್ನಾವಳಿಗಳನ್ನು ಪ್ರಕಟಿಸಿದೆ. ಪ್ರಶ್ನಾವಳಿಗಳು ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು, ಪ್ರತಿಕ್ರಿಯೆ, ಸಲಹೆಗಳಿಗಾಗಿ ಫೆ.10ರವರೆಗೆ ಸಮಯಾವಕಾಶವಿದ್ದು, ಮಾಹಿತಿಯನ್ನು spcgok@gmail.com ಕ್ಕೆ ಸಲ್ಲಿಸಲು ಆಯೋಗ ತಿಳಿಸಿದೆ.

Similar News