ಪತ್ನಿಗೆ ಜೀವನಾಂಶ ನೀಡುವುದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್

Update: 2023-02-05 13:12 GMT

ಬೆಂಗಳೂರು, ಫೆ.5: ವಿಚ್ಛೇದನ ಕೇಸ್‍ನಲ್ಲಿ ಪತಿಯು ಪತ್ನಿಗೆ ಜೀವನ ನಿರ್ವಹಣಾ ಮೊತ್ತ ನೀಡುವುದು ಪತ್ನಿ ಹಾಗೂ ಮಕ್ಕಳ ಬಗ್ಗೆ ತೋರಿದ ಹಿಂದಿನ ನಿರ್ಲಕ್ಷ್ಯಕ್ಕೆ ವಿಧಿಸುವ ಶಿಕ್ಷೆಯಲ್ಲ, ಬದಲಾಗಿ ಪತ್ನಿಯ ಆಸರೆ ಹಾಗೂ ಅಲೆಮಾರಿ ಆಗುವುದನ್ನು ತಪ್ಪಿಸಲು ನೀಡುವ ತ್ವರಿತ ಪರಿಹಾರವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಪತ್ನಿಗೆ ಪ್ರತಿ ತಿಂಗಳು 20 ಸಾವಿರ ರೂ., ಜೀವನ ನಿರ್ವಹಣಾ ವೆಚ್ಚ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್‍ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿ ಈ ಅಭಿಪ್ರಾಯಪಟ್ಟಿದೆ.

ಒಂದು ವರ್ಷದ ಮಗುವಿದ್ದ ನಗರದ ನಾಗವಾರಪಾಳ್ಯದ ಕೈಲಾಶ್ ಹಾಗೂ ಪತ್ನಿಯ ಮಧ್ಯೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಹೀಗಾಗಿ, ಪ್ರತ್ಯೇಕವಾಗಿ ವಾಸವಾಗಿದ್ದರು. ಹೀಗಾಗಿ, ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು 20 ಸಾವಿರ ಜೀವನ ನಿರ್ವಹಣೆ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೈಲಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Similar News