×
Ad

ಕಲಬುರಗಿ: ಚಾಕು ಹಿಡಿದು ಸಾರ್ವಜನಿಕರನ್ನು ಹೆದರಿಸುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪೊಲೀಸರು

Update: 2023-02-06 09:45 IST

ಕಲಬುರಗಿ: ಸಾರ್ವಜನಿಕವಾಗಿ ಚಾಕು ಹಿಡಿದು ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ರವಿವಾರ ರಾತ್ರಿ ಕಲಬುರಗಿ ಸೂಪರ್ ಮಾರ್ಕೆಟ್ ಸಮೀಪ ನಡೆದಿದೆ.

ಗುಂಡು ತಗುಲಿ ಗಾಯಗೊಂಡ ಆರೋಪಿ ಅಬ್ದುಲ್ ಜಾಫರ್ ಸಾಬ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

ಚೌಕ್‌ ಪೊಲೀಸ್‌ ಠಾಣೆಯ ಪಿಎಸ್‌ಐ ವಾಹಿದ್‌ ಕೋತ್ಪಾಲ್‌ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಕ್ತಿಗೆ ಶರಣಾಗುವಂತೆ ಹಾಗೂ ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ಭಯದ ವಾತಾವರಣ ಉಂಟು ಮಾಡದಂತೆ ತಿಳಿ ಹೇಳಿದ ಮೇಲೆಯೂ ಆತ ಕೇಳದೇ ಇದ್ದಾಗ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಖಚಿತ ಪಡಿಸಿವೆ.

ಆರೋಪಿಯು ಮುಂಬೈನಿಂದ ಇತ್ತೀಚೆಗೆ ಕಲಬುರಗಿಗೆ ಆಗಮಿಸಿದ್ದ ಎಂದು ಹೇಳಲಾಗುತ್ತಿದೆ. 

Similar News