ರಕ್ಷಣಾ ವಲಯದಲ್ಲಿ ಭಾರತ ಸ್ವಾವಲಂಬಿಯಾಗಲಿದೆ: ಪ್ರಧಾನಿ ಮೋದಿ

ಎಚ್.ಎ.ಎಲ್.ಲಘು ಹೆಲಿಕಾಪ್ಟರ್ ಘಟಕ ಉದ್ಘಾಟನೆ

Update: 2023-02-06 17:27 GMT

ತುಮಕೂರು, ಫೆ.6: ಇದುವರೆಗೂ ಭಾರತದ ರಕ್ಷಣಾ ಕ್ಷೇತ್ರ ಪರಾವಲಂಬಿ ಯಾಗಿತ್ತು. ಪ್ರತಿಯೊಂದು ವಸ್ತು ಗಳನ್ನು ವಿದೇಶದಿಂದ ಅಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಎಂಟು ವರ್ಷಗಳಲ್ಲಿ ಸರಕಾರ ತೆಗೆದುಕೊಂಡ ನಿರ್ಧಾರದ ಫಲವಾಗಿ ಶೇ.60ರಷ್ಟು ವಸ್ತುಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ರಕ್ಷಣಾ ವಲಯದಲ್ಲಿ ಸಂಪೂರ್ಣ ಸ್ವಾವಲಂಬಿಯಾಗಲಿದೆ. ಈ ಮಹತ್ವದ ಹೆಜ್ಜೆಗೆ ಎಚ್‌ಎಎಲ್‌ ಕಾರ್ಖಾನೆಯೇ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯಲ್ಲಿ ಭಾರತ ಸರಕಾರದ ರಕ್ಷಣಾ ಇಲಾಖೆಯ ವತಿಯಿಂದ ಸ್ಥಾಪಿಸಿರುವ ಎಚ್.ಎ.ಎಲ್. ಲಘು ಹೆಲಿಕಾಪ್ಟರ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ 70 ವರ್ಷಗಳ ಕಾಲ ಮಾಡಿದ ಅಭಿವೃದ್ಧಿಯನ್ನು ಕೇವಲ ಬಿಜೆಪಿ ಎಂಟು ವರ್ಷಗಳಲ್ಲಿಯೇ ಮಾಡಿ ತೋರಿಸಿದೆ ಎಂದರು.

ಕೇಂದ್ರ ಸರಕಾರದ ಈ ಸಾಲಿನ ಬಜೆಟ್ ಬಡವರು, ದೀನ ದಲಿತರು,ಮಧ್ಯಮವರ್ಗದವರು ಎಲ್ಲರಿಗೂ ಸರಕಾರದ ನೆರವು ದೊರೆಯುವಂತಹ ಬಜೆಟ್ ಆಗಿದೆ‌. 7 ಲಕ್ಷದವರೆಗೆ ಅದಾಯ ತೆರಿಗೆ ಇಲ್ಲ. ಅದೇ ರೀತಿ ಹಿರಿಯ ನಾಗರಿಕರು ಇಡುವ ಠೇವಣಿ ಮೇಲಿನ ಲಾಭವನ್ನು 15 ದಿಂದ30 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ರೈತರು,ಸಣ್ಣ ರೈತರ ಅನುಕೂಲ ಕ್ಕಾಗಿ ಶ್ರೀ ಅನ್ನ ಯೋಜನೆ ಜಾರಿಗೆ ತರಲಾಗಿದೆ.ಈ ಯೋಜನೆ ಮೂಲಕ ಕಿರು ಧಾನ್ಯಗಳಾದ ರಾಗಿ,ಅರಕ,ನವಣೆ,ಉದಲು, ಕೋರಲೆ ಸೇರಿದಂತೆ ಸಿರಿಧಾನ್ಯಗಳ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಇದರಿಂದ ತುಮಕೂರು ಜಿಲ್ಲೆಯ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಸರುವಾಸಿಯಾದ ಕರ್ನಾಟಕ ಇನ್ನು ಮುಂದೆ ರಕ್ಷಣಾ ಇಲಾಖೆಯಲ್ಲಿ ಹೆಸರು ಪಡೆಯಲಿದೆ. ಈ ಹೆಲಿಕಾಪ್ಟರ್ ಘಟಕವನ್ನು ಸೇನಾನಿಗಳಿಗೆ ಅರ್ಪಿಸಲಾಗುವುದು.

ರಾಜನಾಥ್ ಸಿಂಗ್, ರಕ್ಷಣಾ ಸಚಿವರು

-------------------------------------

ಎಚ್.ಎ.ಎಲ್.ಕಾರ್ಖಾನೆಯಿಂದ 10 ಸಾವಿರ ಮಂದಿಗೆ ಉದ್ಯೋಗದ ಜೊತೆಗೆ, ಸುಮಾರು 200ಕ್ಕೂ ಹೆಚ್ಚು ಬಿಡಿ ಭಾಗಗಳ ತಯಾರಿಕಾ ಘಟಕಗಳಿಂದ ಸಾವಿರಾರು ಜನರ ಬದುಕು ಹಸನಾಗಲಿದೆ.

 ಬಸವರಾಜ ಬೊಮ್ಮಾಯಿ, ಸಿಎಂ

Similar News