ಅನುಮತಿ ಇಲ್ಲದೆ ಡಿಕೆಶಿ ಮಕ್ಕಳ ಫೋಟೊ ಬಳಕೆ: 2 ಯೂಟ್ಯೂಬ್ ಚಾನಲ್ ಗಳ ವಿರುದ್ಧ FIR

Update: 2023-02-07 04:57 GMT

ಬೆಂಗಳೂರು: ಅನುಮತಿ ಇಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಕ್ಕಳ ಫೋಟೊ ಬಳಸಿಕೊಂಡ ಆರೋಪದಡಿ ಎರಡು ಖಾಸಗಿ ಯೂಟ್ಯೂಬ್ ವಾಹಿನಿಗಳ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕೆಶಿ ಕುಟುಂಬದ ಆಪ್ತರಾದ ಉಮೇಶ್ ಎಂಬುವವರು ನೀಡಿದ ದೂರಿನನ್ವಯ  ‘ಇಂಡಿಯಾ ರಿಪೋರ್ಟ್ಸ್’ ಹಾಗೂ ‘ಬಿ4ಯು ಕನ್ನಡ’ ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಡಿ.ಕೆ. ಶಿವಕುಮಾರ್ ಅವರ ಮಕ್ಕಳು ಮಾಧ್ಯಮಗಳ ಮುಂದೆ ಬರೋದಿಲ್ಲ ಯಾಕೆ?’ ಹಾಗೂ ‘ಹೂ ಇಸ್ ಆಭರಣ ಡಿ.ಕೆ. ಶಿವಕುಮಾರ್ ಕೆಪಿಸಿಸಿ’ ಶೀರ್ಷಿಕೆಯಡಿ ವಿಡಿಯೊ ಹರಿಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿಬೆಂಗಳೂರು: ತೆಂಗಿನ ಮರ ಹತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮರದ ಮೇಲೆಯೇ ಮೃತ್ಯು

Similar News