ನ್ಯಾಯಾಂಗ ನಿಂದನೆ: ವಕೀಲನಿಗೆ ನ್ಯಾಯಾಂಗ ಬಂಧನಕ್ಕೆ ಹೈಕೋರ್ಟ್ ಸೂಚನೆ

Update: 2023-02-08 14:13 GMT

ಬೆಂಗಳೂರು, ಫೆ.8: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಪೀಠವು 45 ವರ್ಷದ ವಕೀಲರೊಬ್ಬರಿಗೆ ಒಂದು ವಾರದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಸೂಚಿಸಿದೆ.

ಹೈಕೋರ್ಟ್‍ನ ಮುಖ್ಯ ನಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಪೀಠವು ಫೆ.2ರಂದು 2019ರಲ್ಲಿ ಅನಿಲ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನಡೆಸಿತ್ತು.ವಕೀಲರು ನ್ಯಾಯಾಲಯದ ಹಿಂದಿನ ವಿಚಾರಣೆಯ ಸಮಯದಲ್ಲಿದುರಹಂಕಾರದಿಂದ ವರ್ತಿಸಿದ್ದಾರೆ.ಆಧಾರರಹಿತವಾಗಿ ನ್ಯಾಯಾಧೀಶರ ವಿರುದ್ಧಆರೋಪ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಪೀಠ ಹೇಳಿದೆ.

ಈ ಹಿಂದೆ ವಕೀಲರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೌಖಿಕವಾಗಿಅಥವಾ ಲಿಖಿತವಾಗಿಅರ್ಜಿ ಸಲ್ಲಿಸಲು ಸಮಯಇದೆಯೇಎಂದು ಆರೋಪಿಗಳನ್ನು ಹೈಕೋರ್ಟ್ ಕೇಳಿತ್ತು.ಆ ಸಂದರ್ಭದಲ್ಲಿದುರಂಕಾರದಿಂದ ವರ್ತಿಸಿದ್ದಲ್ಲದೇ, ನ್ಯಾಯಾಲಯದಲ್ಲಿ ಸನ್ನೆ ಮಾಡಲು ಪ್ರಯತ್ನಿಸಿದ್ದರು' ಎಂದು ವಿಭಾಗೀಯ ಪೀಠ ಉಲ್ಲೇಖಿಸಿದೆ.

ನ್ಯಾಯಾಧೀಶರ ವಿರುದ್ಧ ಮಾಡಿದ್ದಆರೋಪದಲ್ಲಿಯಾವುದೇಆಧಾರವಿಲ್ಲ. ಇದರಿಂದ ನ್ಯಾಯಾಲಯದಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಹೀಗಾಗಿ, ಬೇಷರತ್‍ಕ್ಷಮೆಯಾಚಿಸಲು ವಕೀಲರಿಗೆ ಕಾಲಾವಕಾಶ ನೀಡಲಾಗಿತ್ತು.ಆದರೂ, ಕ್ಷಮೆ ಕೇಳಿರಲಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಸದ್ಯ ನ್ಯಾಯಾಂಗ ಬಂಧನಕ್ಕೆ ಸೂಚಿಸಿದೆ.

Similar News