ನ್ಯಾಯಾಂಗ ನಿಂದನೆ: ಕಾರಾಗೃಹ ಶಿಕ್ಷೆ ಸೇರಿ ಎರಡು ಬಗೆಯ ಆಯ್ಕೆ ನೀಡಿದ ಹೈಕೋರ್ಟ್

Update: 2023-02-08 15:11 GMT

ಬೆಂಗಳೂರು, ಫೆ.8: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ವ್ಯಾಜ್ಯದಲ್ಲಿರುವ ಜಮೀನು ಮಾರಾಟ ಮಾಡಿದ ಕೇಸ್‍ನಲ್ಲಿ ವ್ಯಕ್ತಿಯೊಬ್ಬನಿಗೆ 3 ತಿಂಗಳು ಕಾರಾಗೃಹ ವಾಸ ಅಥವಾ ಜಮೀನು ಮಾರಾಟದ ಹಣ ಠೇವಣಿ ಇಡುವ ಆಯ್ಕೆ ಶಿಕ್ಷೆಯನ್ನು ಹೈಕೋರ್ಟ್ ವಿಧಿಸಿದೆ.

ಈ ಸಂಬಂಧ ಸೋಮಣ್ಣ ಮತ್ತಿತರರು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಮೈಸೂರಿನ ನಂಜನಗೂಡಿನ ತುಮ್ಮನೇರಳೆ ಗ್ರಾಮದ ಪ್ರಕಾಶ್‍ಗೆ ಶಿಕ್ಷೆ ವಿಧಿಸಿದೆ.

ಆರೋಪಿ ಪ್ರಕಾಶ್ ಬೇಷರತ್ ಕ್ಷಮೆ ಕೋರಿದ್ದಾರೆ. ಆದರೆ, ಕ್ಷಮೆ ಎನ್ನುವುದು ವಿಷಾದವಲ್ಲ. ಕ್ಷಮೆಯನ್ನು ಪರಿಗಣಿಸಿ ಕೇಸ್‍ನ್ನು ಕೈಬಿಟ್ಟರೆ ಉದ್ದೇಶಪೂರ್ವಕವಾಗಿಯೇ ನ್ಯಾಯಾಂಗ ನಿಂದನೆ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಟ್ಟಂತಾಗುತ್ತದೆ. ಹೀಗಾಗಿ, ಆರೋಪಿಯನ್ನು ಸುಮ್ಮನೆ ಬಿಡಲಾಗದು. ಆತ ಶಿಕ್ಷೆಯನ್ನು ಅನುಭವಿಸಲೇಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ. 

ಪ್ರಕರಣವೇನು?: ಜಮೀನವೊಂದರ ಸಂಬಂಧ ಸೋಮಣ್ಣ ಮತ್ತು ಪ್ರಕಾಶ್ ಎಂಬುವರ ನಡುವೆ ವ್ಯಾಜ್ಯವಿತ್ತು. ಆ ಕುರಿತು ಜಮೀನು ವಿಭಜನೆ ಹಾಗೂ ಪ್ರತ್ಯೇಕ ಸ್ವಾಧೀನಕ್ಕೆ ಅನುಮತಿ ಕೋರಿ ಸೋಮಣ್ಣ ವಿಚಾರಣಾಧೀನ ನ್ಯಾಯಾಲಯಕ್ಕೆ 2009ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು 2011ರಲ್ಲಿ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಸೋಮಣ್ಣ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

Similar News