ಪಕ್ಷ ತೀರ್ಮಾನಿಸಿದರೆ ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡ ವಿರುದ್ಧ ಸ್ಪರ್ಧೆಗೆ ಸಿದ್ಧ: ಹೆಚ್.ಡಿ. ರೇವಣ್ಣ

Update: 2023-02-09 17:38 GMT

ಹಾಸನ:  ನಮ್ಮ ಪಕ್ಷ (ಜೆಡಿಎಸ್) ತೀರ್ಮಾನಿಸಿದರೆ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. 

ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,  ಹಾಸನ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧಿಸಿ ಗೆಲ್ಲಲಿ. 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುತ್ತೇನೆಂದಿದ್ದ ಪ್ರೀತಂ ಗೌಡ ಅವರಿಗೆ ಮೇಲಿನಂತೆ ತಿರುಗೇಟು ನೀಡಿದರು. 

''ಸಚಿವ ಎ. ಮಂಜು ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಎ. ಮಂಜು ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ, ಹೆಚ್.ಡಿ. ದೇವೇಗೌಡರ, ಮಾಜಿ ಸಿಎಂ. ಹೆಚ್.ಡಿ. ಕುಮಾರಸ್ವಾಮಿ ಕುರಿತು ತಿರ್ಮಾನ ಮಾಡುತ್ತಾರೆ' ಎಂದು ಹೇಳಿದರು. 

''ಡಿ.ಕೆ. ಸುರೇಶ್ ಹೊಳೆನರಸೀಪುರ ಪ್ರವಾಸದ ಮಾಡಿದ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಒಳ್ಳೆಯದಾದರೆ ಪಕ್ಷ ಬಿಡುವರು ಪಕ್ಷ ಬಿಡಲಿ. ಶಿವಲಿಂಗೇಗೌಡ ಕಾಂಗ್ರೆಸ್ ಸೆರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಎ. ಮಂಜು, ಪಕ್ಷಕ್ಕೆ ಬರುತ್ತಾರೆ ಅಂತ ಮಾತ್ರ ಹೇಳಿದ್ದಾರೆ. ಇವರೆ ಅರಕಲಗೂಡಿಗೆ ಅಭ್ಯರ್ಥಿ ಅಂತ ಹೇಳಿಲ್ಲ. ಈ ಬಾರಿ 7 ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಪಾರ್ಲಿಮೆಂಟ್ ಬೋರ್ಡನಲ್ಲಿ ತಿರ್ಮಾನ ಮಾಡುತ್ತಾರೆ' ಎಂದು ಸ್ಪಷ್ಟಪಡಿಸಿದರು. 

''ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ಲೆಕ್ಕಿಸಿದೆ ಕಳೆದ 68 ದಿನಗಳಿಂದ ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ. .ಕುಮಾರಸ್ವಾಮಿ ಮಾತು ಕೊಟ್ಟಂತೆ ನಡೆದುಕೊಳ್ಳುವ ನಾಯಕ'' ಎಂದು ಇದೆ ವೇಳೆ ಬಣ್ಣಿಸಿದರು.

Similar News