×
Ad

ಸಂವಿಧಾನ ಬದಲಾಯಿಸಲು ಬಂದರೆ ಶೂದ್ರರು ಎದ್ದೇಳಬೇಕು: ಸಿದ್ದರಾಮಯ್ಯ ಕರೆ

Update: 2023-02-09 23:15 IST

ದಾವಣಗೆರೆ, ಫೆ.9: ಯಾರೇ ಸಂವಿಧಾನವನ್ನು ಬದಲಾಯಿಸಲು, ಹಾಳು ಮಾಡಲು ಬಂದರೂ ಎಲ್ಲ ಶೂದ್ರರು ಎದ್ದೇಳಬೇಕು. ಅದನ್ನು ವಿರೋಧಿಸಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಐದನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ‘ವಾಲ್ಮೀಕಿ ವಿಜಯ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂವಿಧಾನ ಇರುವುದರಿಂದಲೇ ನಾನು ವಿದ್ಯೆ ಕಲಿಯಲು ಸಾಧ್ಯವಾಯಿತು. ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ನೀವೂ ವಿದ್ಯೆ ಕಲಿಯಲು ಸಾಧ್ಯವಾಯಿತು. ಅಂತಹ ಸಂವಿಧಾನವನ್ನು ನಾವೆಲ್ಲರೂ ರಕ್ಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು. 

ಈ ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ'ನೀವು ಊಟಕ್ಕೋದ್ರೂ ನಾನ್ ಭಾಷಣ ನಿಲ್ಸಲ್ಲ..': ವೈರಲ್ ಆಯ್ತು ಬಿಜೆಪಿ ರಾಜ್ಯಾಧ್ಯಕ್ಷರ ವಿಡಿಯೋ 

Similar News