×
Ad

ಕಾರವಾರ ಸಿಂಗಾಪುರಕ್ಕೆ ಹೋಗಿದೆ ಎಂದ ನಳಿನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಹೀಗೆ...

Update: 2023-02-10 10:26 IST

ಬೆಂಗಳೂರು:  ಕಾರವಾರ ಸಿಂಗಾಪುರಕ್ಕೆ ಹೋಗಿದೆ ಎಂದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ವಿರೋಧ ಪಕ್ಷ ಕಾಂಗ್ರೆಸ್ @INCKarnataka ತಿರುಗೇಟು ನೀಡಿದೆ.

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ನಡೆದ ಮತಗಟ್ಟೆ ಮತ್ತು ಪೇಜ್ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ  ನಳಿನ್ ಕುಮಾರ್ ಕಟೀಲ್, ''ಅಂಕೋಲಾ ನಗರವೇ ಪರಿವರ್ತನೆ ಆಗಿದೆ, ಚತುಷ್ಪಥ ರಸ್ತೆಗಳ ಕಾಮಗಾರಿಗಳು ಅಗ್ತಾ ಇದ್ದಾವೆ, ಬೆಂಗಳೂರನ್ನ ನೋಡಿದ ಹಾಗೆ ಅಂಕೋಲಾ ಆಗಿದೆ. ಸಿಂಗಾಪುರದ ಹತ್ತಿರ ಕಾರವಾರ ಹೋಗಿದೆ'' ಎಂದು ಹೇಳಿಕೆ ನೀಡಿದ್ದರು. 

ಈ ಹೇಳಿಕೆಯ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ''ಬೆಳಿಗ್ಗೆ ಉದ್ಘಾಟನೆಯಾದ ಮೇಲ್ಸೇತುವೆಗಳು ಸಂಜೆ ಬಂದ್ ಆಗುತ್ತವೆ. ಮೋದಿ ಭೇಟಿಗೆ ಹಾಕಿದ ರಸ್ತೆ ಡಾಂಬರು ಮರುದಿನವೇ ಕಿತ್ತು ಬರುತ್ತಿವೆ. ರಸ್ತೆಗುಂಡಿಗಳಿಗೆ ದಿನಕ್ಕೊಂದು ಜೀವ ಹೋಗುತ್ತಿವೆ. ರಸ್ತೆಗಳಲ್ಲಿ ಕಂದಕ ಬಿದ್ದು ಪಾತಾಳ ದರ್ಶನವಾಗುತ್ತಿ. ನಳಿನ್ ಕುಮಾರ್ ಕಟೀಲ್ ಅವರೇ , ನಿಮ್ಮ ದುರಾಡಳಿತಕ್ಕೆ ಬೇಸತ್ತು ಕಾರವಾರ ಸಿಂಗಾಪುರಕ್ಕೆ ಹೋಗಿರಬಹುದು!'' ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದೆ. 

Similar News